ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಪೊಸ್ತೊಲಿಕ್ ನುನ್ಸಿಯೋಗೆ ಆತ್ಮೀಯ ಸ್ವಾಗತ

(ನ್ಯೂಸ್‌ ಕಡಬ) newskadaba.com,  .20:  ಮಂಗಳೂರು: ಭಾರತ ಮತ್ತು ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ ಡಾ. ಲಿಯೋ ಪೋಲ್ಡೊ ಗಿರೆಲ್ಲಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಭವ್ಯ ಸ್ವಾಗತ ಕೋರಲಾಯಿತು.

ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ಗೌರವಾನ್ವಿತ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭದಲ್ಲಿ ಭಾಗವಹಿಸುವ ಉದ್ದೇಶದಿಂದ ಅವರು ಮಂಗಳೂರಿಗೆ ಆಗಮಿಸಿದ್ದರು.

ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಕುಲಪತಿ ವಂ| ಸ್ಟೀಫನ್ ಡಿಸೋಜಾ ಅವರು ಡಾ. ಗಿರೆಲ್ಲಿ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಧರ್ಮಪ್ರಾಂತ್ಯದ ಜುಡಿಶಿಯಲ್ ವಿಕಾರ್ ವಂ| ಡಾ| ರೋಶನ್ ಡಿಸೋಜಾ, ಧರ್ಮಗುರು ವಂ| ಜಾನ್ಸಿಲ್ ಆಳ್ವಾ, ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಸಹಾಯಕ ಕಮೀಷನರ್ ಶುಭ ರೊಡ್ರಿಗಸ್ ಹಾಗೂ ಓಸ್ವಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.

ಸಮಾರಂಭಕ್ಕೆ ಸಂಬಂಧಿಸಿದಂತೆ ಧಾರ್ಮಿಕ ವಲಯದಲ್ಲಿ ವಿಶೇಷ ಉತ್ಸಾಹ ಕಂಡುಬಂದಿದೆ.

Scroll to Top