ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಅಕ್ಷಯ ತೃತೀಯಗೂ ಮುನ್ನ ಭಾರೀ ಕುಸಿತ ಕಂಡ ಚಿನ್ನದ ದರ! ಇವತ್ತಿನ ಗೋಲ್ಡ್ ರೇಟ್ ಎಷ್ಟು?



(ನ್ಯೂಸ್‌ ಕಡಬ) newskadaba.com,  .17: ಅಕ್ಷಯ ತೃತೀಯ ಹಬ್ಬದ ಶುಭ ಸಂದರ್ಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಕಳೆದ ಮೂರು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ದಿಢೀರ್ ಕುಸಿತ ಕಂಡುಬಂದಿದೆ. ಆಭರಣ ಪ್ರಿಯರಿಗೆ ಇದು ಖುಷಿಯ ಸುದ್ದಿಯಾಗಿದ್ದು, ಬೆಲೆ ಇಳಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಮತ್ತೆ ಚೇತರಿಕೆ ನಿರೀಕ್ಷಿಸಲಾಗಿದೆ.







ಚಿನ್ನದ ದರದಲ್ಲಿ ಭಾರಿ ಇಳಿಕೆ






24 ಕ್ಯಾರಟ್ ಚಿನ್ನ (ಅಪರಂಜಿ): ಪ್ರತಿ 10 ಗ್ರಾಂ ಚಿನ್ನದ ಮೇಲೆ ₹1,370 ರಷ್ಟು ಭಾರಿ ಇಳಿಕೆಯಾಗಿದೆ. ನಿನ್ನೆ ಪ್ರತಿ ಗ್ರಾಂಗೆ ₹15,557 ಇದ್ದ ಬೆಲೆ ಇಂದು ₹15,420 ಕ್ಕೆ ತಲುಪಿದೆ.

22 ಕ್ಯಾರಟ್ ಚಿನ್ನ (ಆಭರಣ ಚಿನ್ನ): ಪ್ರತಿ 10 ಗ್ರಾಂ ಆಭರಣ ಚಿನ್ನದ ಮೇಲೆ ₹1,250 ಕುಸಿತ ಕಂಡಿದೆ. ನಿನ್ನೆ ಪ್ರತಿ ಗ್ರಾಂಗೆ ₹14,260 ಇದ್ದ ದರ ಇಂದು ₹14,135 ಕ್ಕೆ ಇಳಿಕೆಯಾಗಿದೆ.

ಬೆಳ್ಳಿ ದರದಲ್ಲೂ ಕುಸಿತ

ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಬೆಲೆಯಲ್ಲೂ ಇಂದು ಗಮನಾರ್ಹ ಇಳಿಕೆ ಕಂಡುಬಂದಿದೆ. ನಿನ್ನೆಗೆ ಹೋಲಿಸಿದರೆ ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ₹5,000 ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿಯ ದರ ₹2,65,000 ಆಗಿದೆ.

ಅಕ್ಷಯ ತೃತೀಯಕ್ಕೆ ಸಿಹಿ ಸುದ್ದಿ: ಸಾಮಾನ್ಯವಾಗಿ ಅಕ್ಷಯ ತೃತೀಯ ಹತ್ತಿರವಾಗುತ್ತಿದ್ದಂತೆ ಚಿನ್ನದ ದರ ಏರಿಕೆಯಾಗುವುದು ವಾಡಿಕೆ. ಆದರೆ ಈ ಬಾರಿ ಹಬ್ಬದ ಮುನ್ನವೇ ಬೆಲೆ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಮಾಧಾನ ಮೂಡಿಸಿದೆ. ಹೂಡಿಕೆದಾರರು ಮತ್ತು ಆಭರಣ ಖರೀದಿದಾರರು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗುತ್ತಿದ್ದಾರೆ.

error: Content is protected !!
Scroll to Top