(ನ್ಯೂಸ್ ಕಡಬ) newskadaba.com, ಎ.15: ಅಮೆರಿಕ- ಇರಾನ್ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹರ್ಮುಜ್ ನಿರ್ಬಂಧದಿಂದ ತೈಲ ಬೆಲೆಗಳು ಏರಿಕೆ ಆಗಿವೆ. ಹಣದುಬ್ಬರದ ಭೀತಿಯಿಂದ ಜನ ಸುರಕ್ಷತೆಯ ಹೂಡಿಕೆಯತ್ತ ಮುಖ ಮಾಡುತ್ತಿದ್ದು, ಚಿನ್ನ ಬೆಳ್ಳಿ ದರದ ಏರಿಕೆಗೆ ಕಾರಣವಾಗಿದೆ.
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಏಪ್ರಿಲ್ 15, 2026, ಬುಧವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 1420 ರೂ ಏರಿಕೆ ಆಗಿ,1,55,350 ರೂಪಾಯಿ ಬೆಲೆ ದಾಖಲಾಗಿದೆ. 1 ಗ್ರಾಂ ಬೆಲೆ ಇಂದು 142 ರೂ ಏರಿಕೆ ಆಗಿದ್ದು, 15,535 ರೂ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 130 ರೂ ಏರಿಕೆ ಆಗಿ 14,240 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 1300 ರೂ ಏರಿಕೆಯಾಗಿ, 1,42,400 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆ ತಟಸ್ಥ
ಬೆಳ್ಳಿ ಬೆಲೆ ಇಂದು ಏರಿಕೆಯಾಗಿದೆ. ಕೆಜಿಯಲ್ಲಿ 15 ಸಾವಿರ ಏರಿಕೆಯಾಗಿದ್ದು, ಗ್ರಾಂ ಬೆಲೆ 270 ರೂಪಾಯಿ ಹಾಗೂ ಕೆಜಿ ಬೆಲೆ 2,70,000 ರೂ ಬೆಲೆಗ ಆಗಿದೆ.
ಚಿನ್ನ-ಬೆಳ್ಳಿ ಬೆಲೆ ಏರಿಳಿತ
ಇರಾನ್-ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ, ಡಾಲರ್ ಬೆಲೆ ಏರಿಳಿತ ಸೇರಿದಂತೆ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಏರುಪೇರಾಗುತ್ತಿದೆ.









