ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ವಿಟ್ಲ : ಮಗುವಿನ ಚಿನ್ನ ಕಳವು ಪ್ರಕರಣ – ವೈರಲ್ ಫೋಟೋದ ಬಗ್ಗೆ ಸ್ಪಷ್ಟನೆ – News Kadaba

ವಿಟ್ಲ : ಮಗುವಿನ ಚಿನ್ನ ಕಳವು ಪ್ರಕರಣ – ವೈರಲ್ ಫೋಟೋದ ಬಗ್ಗೆ ಸ್ಪಷ್ಟನೆ

(ನ್ಯೂಸ್‌ ಕಡಬ) newskadaba.com,  ಎ.15:  ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಪದವು ಪ್ರದೇಶದಲ್ಲಿ ನಡೆದ ಮಗುವಿನ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾವಚಿತ್ರ ಕುರಿತು ಪೊಲೀಸರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ…

ಘಟನೆಯ ವಿವರಗಳ ಪ್ರಕಾರ, 7 ವರ್ಷದ ಮಗುವಿನ ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು, ಕೆ.ಟಿ.ಎಂ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಸಿ ಎಳೆದುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2026, ಕಲಂ 309(4) BNS 2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗುತ್ತಿದೆ.

ಇದೀಗ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಟಿ.ಎಂ ಬೈಕ್ ಸವಾರನೊಬ್ಬನ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಆತನೇ ಆರೋಪಿಯೆಂದು ಊಹಿಸಲಾಗುತ್ತಿದೆ. ಆದರೆ, ಈ ಬಗ್ಗೆ ತನಿಖೆ ನಡೆಸಿದ ವಿಟ್ಲ ಪೊಲೀಸರು, ಆ ಬೈಕ್ ಸವಾರನನ್ನು ವಿಚಾರಣೆಗೊಳಪಡಿಸಿದ್ದು, ಈತನಿಗೂ ಘಟನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಆ ವ್ಯಕ್ತಿಯ ಕುರಿತು ಯಾವುದೇ ನಕಾರಾತ್ಮಕ ಅಭಿಪ್ರಾಯ ಅಥವಾ ತಪ್ಪು ಕಲ್ಪನೆಗಳನ್ನು ಹೊಂದಬಾರದು ಎಂದು ತಿಳಿಸಿದ್ದಾರೆ. ಕುಟುಂಬದವರ ಮನವಿಯ ಮೇರೆಗೆ ಈ ಸ್ಪಷ್ಟೀಕರಣ ನೀಡಲಾಗಿದೆ. ಪ್ರಸ್ತುತ, ನಿಜವಾದ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Scroll to Top