ಮೂಡುಬಿದಿರೆ: ಪಿಯುಸಿ ಟಾಪರ್ ದಿಶಾ ಪೂಜಾರಿ ಸಾಧನೆಗೆ ಮೆಚ್ಚುಗೆ; ವಿಶ್ವ ಬಂಟರ ಪ್ರತಿಷ್ಠಾನದಿಂದ ಶೈಕ್ಷಣಿಕ ದತ್ತು



(ನ್ಯೂಸ್‌ ಕಡಬ) newskadaba.com,  .14: 2026 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ ಪೂಜಾರಿಯ ಮುಂದಿನ ವಿದ್ಯಾಭ್ಯಾಸಕ್ಕೆ ಮಹತ್ವದ ಬೆಂಬಲ ಲಭಿಸಿದೆ.







ವಿಶ್ವ ಬಂಟರ ಪ್ರತಿಷ್ಟ್ರಾನದ ಮಹಾಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರು ದಿಶಾ ಪೂಜಾರಿಯ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಸೋಮವಾರ ಸಂಜೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರ ಕಚೇರಿಯಲ್ಲಿ ವಿಶ್ವ ಬಂಟರ ಪ್ರತಿಷ್ಟಾನದ ವತಿಯಿಂದ ದಿಶಾ ಅವರನ್ನು ಗೌರವಿಸಲಾಯಿತು.






ಅವಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಬಿ. ಆರ್. ಶೆಟ್ಟಿ, ದೂರವಾಣಿ ಮೂಲಕ ದಿಶಾಳೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಜೊತೆಗೆ, ದಿಶಾಳ ಆಯ್ಕೆಯಂತೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಬಿ.ಕಾಂ ಶಿಕ್ಷಣ ಹಾಗೂ ನಂತರದ ಕನಸಾದ ಚಾರ್ಟರ್ಡ್ ಅಕೌಂಟೆಂಟ್ ಆಗುವವರೆಗಿನ ಶಿಕ್ಷಣ, ಊಟ ಮತ್ತು ವಸತಿಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದರು. ಇದೇ ವೇಳೆ, ದಿಶಾ ಪೂಜಾರಿ ಪಿಯು ಶಿಕ್ಷಣ ಪಡೆದ ಆಳ್ವಾಸ್ ಆವರಣದಲ್ಲಿರುವ ಡಾ. ಬಿ. ಆರ್. ಶೆಟ್ಟಿ ಅವರ ಹೆಸರಿನ ಬ್ಲಾಕ್‍ನಲ್ಲಿ ಛಾಯಾಚಿತ್ರಗಳನ್ನು ತೆಗೆಯಲಾಯಿತು.

ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವಿಶ್ವ ಬಂಟರ ಪ್ರತಿಷ್ಟಾನದ ಪ್ರಾಜೆಕ್ಟ್ ಡೈರೆಕ್ಟರ್ ಡಾ. ಸಂಜೀವ್ ರೈ, ಕಾರ್ಯದರ್ಶಿ ಡಾ. ಬಿ. ಸಚ್ಚಿದಾನಂದ ರೈ, ಉಪಾಧ್ಯಕ್ಷ ಸಿಎ ಸುದೀರ್ ಕುಮಾರ್ ಶೆಟ್ಟಿ, ಖಜಾಂಚಿ ಸಿಎ ಪ್ರವೀಣ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಡಾ. ಶಿಶಿರ್ ಶೆಟ್ಟಿ, ಪ್ರಕಾಶ್ ಮಾಣೈ ಹಾಗೂ ಸದಸ್ಯರಾದ ದೀಪಕ್ ಪ್ರಸಾದ್ ಮತ್ತು ಜೀವರಾಜ್ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!
Scroll to Top