ಇಂದು (ಏ.9) ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡ, ಉಡುಪಿಗೆ ಅಗ್ರಸ್ಥಾನ ಉಳಿಕೆ ವಿಶ್ವಾಸ



(ನ್ಯೂಸ್‌ ಕಡಬ) newskadaba.com,  ಎ.09: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಏ.9ರಂದು ಪ್ರಕಟವಾಗಲಿದೆ. ಕಳೆದ ಕೆಲವು ವರ್ಷಗಳಿಂದ ದ.ಕ. ಹಾಗೂ ಉಡುಪಿ ಪಿಯು ಫಲಿತಾಂಶದಲ್ಲಿ ಫಸ್ಟ್‌, ಸೆಕೆಂಡ್‌ ಸ್ಥಾನವನ್ನು ಉಳಿಸಿಕೊಂಡು ಸಾಗುತ್ತಿದ್ದು, ಈ ಬಾರಿಯೂ ಭದ್ರವಾಗಿ ಉಳಿಯಲಿದೆ ಎನ್ನುವ ಲೆಕ್ಕಾಚಾರ ಇದೆ.







ಮಧ್ಯಾಹ್ನ 3 ಗಂಟೆಗೆ ರಿಸಲ್ಟ್






ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಏಪ್ರಿಲ್‌ 9ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಹೊರಬೀಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಫಲಿತಾಂಶ ವೀಕ್ಷಣೆ ಎಲ್ಲಿ-ಹೇಗೆ?

ಅಧಿಕೃತ ವೆಬ್‌ಸೈಟ್‌: https://karresults.nic.in


ಮೊಬೈಲ್‌ ಆ್ಯಪ್‌: ಕರ್ನಾಟಕ ಒನ್‌(Karnataka One)
ನೇರ ಸಂದೇಶ: ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಮಂಡಳಿಯೇ ವಾಟ್ಸ್ಯಾಪ್‌ ಅಥವಾ ಎಸ್‌ಎಂಎಸ್‌ ಮೂಲಕ ಫಲಿತಾಂಶ ಕಳುಹಿಸಲಿದೆ. ಕಾಲೇಜು ನೋಟಿಸ್‌ ಬೋರ್ಡ್‌ : ಗುರುವಾರ ಮಧ್ಯಾಹ್ನ 3ಕ್ಕೆ ಪ್ರಕಟ ಡಿಜಿ ಲಾಕರ್‌ನಲ್ಲಿ ಅಂಕಪಟ್ಟಿ. ಮಂಡಳಿಯು ಈ ಬಾರಿ ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ವಿದ್ಯಾರ್ಥಿಗಳು ತಮ್ಮ ಅಧಿಕೃತ ಅಂಕಪಟ್ಟಿಯನ್ನು ಡಿಜಿ ಲಾಕರ್‌ ಮೂಲಕ ಪಡೆಯಲು ಅವಕಾಶ ಕಲ್ಪಿಸಿದೆ. ಡೌನ್‌ಲೋಡ್‌ ವಿಧಾನ: http://www.digilocker.gov.in ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಅಂಕಪಟ್ಟಿ ಪಡೆಯಬಹುದು..

error: Content is protected !!
Scroll to Top