(ನ್ಯೂಸ್ ಕಡಬ) newskadaba.com, ಎ.08: ಅಮೆರಿಕ-ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಹಿನ್ನೆಲೆ, ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿದೆ. ತೈಲ ಬೆಲೆಗಳು ಇಳಿಕೆಯಾಗಿದ್ದು, ಲೋಹಗಳ ಮೇಲಿನ ಹೂಡಿಕೆ ಹೆಚ್ಚಳವಾದ ಹಿನ್ನೆಲೆ ಭಾರೀ ಬೇಡಿಕೆ ಸೃಷ್ಟಿಯಾಗಿ, ಚಿನ್ನ ಬೆಳ್ಳಿ ದರಗಳು ಭಾರಿ ಏರಿಕೆ ಕಂಡಿವೆ,
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಏಪ್ರಿಲ್ 8, 2026, ಬುಧವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 3,980 ರೂ ಏರಿಕೆ ಆಗಿ,1,53,820 ರೂಪಾಯಿ ಬೆಲೆ ದಾಖಲಾಗಿದೆ. 1 ಗ್ರಾಂ ಬೆಲೆ ಇಂದು 398 ರೂ ಏರಿಕೆ ಆಗಿದ್ದು, 15,382 ರೂ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 365 ರೂ ಏರಿಕೆ ಆಗಿ 14,100 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 3650 ರೂ ಏರಿಕೆಯಾಗಿ, 1,41,000 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆ ಏರಿಕೆ
ಬೆಳ್ಳಿ ಬೆಲೆ ಇಂದು 10 ರೂಪಾಯಿ ಹೆಚ್ಚಳವಾಗಿದ್ದು, ಗ್ರಾಂ ಬೆಲೆ 260 ರೂಪಾಯಿ ಹಾಗೂ ಕೆಜಿ ಬೆಲೆ 2,60,000 ರೂ ಬೆಲೆ ಇದೆ.









