ಅಮೇರಿಕಾದ ಪನಾಮ ಕಾಲುವೆ ಬಳಿ ಭಾರೀ ಸ್ಫೋಟ – ಹಲವರಿಗೆ ಗಾಯ, ಒಬ್ಬರು ನಾಪತ್ತೆ



(ನ್ಯೂಸ್ಕಡಬ) newskadaba.com,  ಎ.07: ಪನಾಮ ಕಾಲುವೆಯ ಪೆಸಿಫಿಕ್ ಪ್ರವೇಶದ್ವಾರದಲ್ಲಿರುವ ಅಮೇರಿಕಾದ ಸೇತುವೆ ಸಮೀಪ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..







ನಗರದ ಪಶ್ಚಿಮ ಭಾಗದಲ್ಲಿರುವ ಬಾಲ್ಬೋವಾ ಪ್ರದೇಶದ ಲಾ ಬೊಕಾ ಬಳಿ ಈ ದುರಂತ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಗಳ ಪ್ರಕಾರ, ಮೂರು ಇಂಧನ ಟ್ಯಾಂಕರ್‌ಗಳಿಗೆ ಬೆಂಕಿ ತಗುಲಿ ನಂತರ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮವಾಗಿ ಸೇತುವೆ ಪಕ್ಕದಲ್ಲಿದ್ದ ಇತರೆ ವಾಹನಗಳಿಗೂ ಹಾನಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ತುರ್ತು ಸೇವೆಗಳು ಕಾರ್ಯಾಚರಣೆ ನಡೆಸುತ್ತಿವೆ.






ಸುಮಾರು 1,654 ಮೀಟರ್ ಉದ್ದದ ಪ್ರಮುಖ ಸಂಪರ್ಕ ಮಾರ್ಗವಾದ ಬ್ರಿಡ್ಜ್ ಆಫ್ ದಿ ಅಮೆರಿಕಾಸ್ ಅನ್ನು ಸುರಕ್ಷತಾ ಕಾರಣಗಳಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ನಾಪತ್ತೆಯಾದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

error: Content is protected !!
Scroll to Top