(ನ್ಯೂಸ್ ಕಡಬ) newskadaba.com, ಎ.04 ಪುತ್ತೂರು : ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಕಾರ್ಪೊರೇಟ್ ಜಗತ್ತನ್ನು ಆಳುತ್ತಿರುವ ಈ ಕಾಲಘಟ್ಟದಲ್ಲಿ, ಯುವಜನತೆಯನ್ನು ಜಾಗತಿಕ ಮಟ್ಟದ ಸಾಫ್ಟ್‌ವೇರ್ ತಂತ್ರಜ್ಞರನ್ನಾಗಿ ರೂಪಿಸಲು ಪುತ್ತೂರಿನ ಪ್ರತಿಷ್ಠಿತ ಉದ್ಯೋಗ ಕೌಶಲ್ಯ ತರಬೇತಿ ಸಂಸ್ಥೆ ‘ವಿದ್ಯಾಮಾತಾ ಅಕಾಡೆಮಿ’ ಈಗ ಹೊಸ ಹೆಜ್ಜೆ ಇಟ್ಟಿದೆ. ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಕೋಡಿಂಗ್ ಕ್ಷೇತ್ರದಲ್ಲಿ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ “CODE-ARCHITECT” ಎಂಬ ವಿಶಿಷ್ಟ ತರಬೇತಿ ಯೋಜನೆಯನ್ನು ಸಂಸ್ಥೆಯು ಪ್ರಪ್ರಥಮ ಬಾರಿಗೆ ಪರಿಚಯಿಸುತ್ತಿದೆ.
ಪದವಿಗಿಂತ ಕೌಶಲ್ಯಕ್ಕೆ ಆದ್ಯತೆ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಅಥವಾ ಸ್ನಾತಕೋತ್ತರ ಪದವಿಗಳು ಮಾತ್ರ ಉದ್ಯೋಗವನ್ನು ಖಾತರಿಪಡಿಸುವುದಿಲ್ಲ. ಉತ್ತಮ ಅಂಕಗಳ ಜೊತೆಗೆ ಪ್ರಾಯೋಗಿಕ ಜ್ಞಾನ ಅತ್ಯಗತ್ಯ. ಈ ವಾಸ್ತವವನ್ನು ಅರಿತಿರುವ ವಿದ್ಯಾಮಾತಾ ಅಕಾಡೆಮಿಯು, ಸಾಫ್ಟ್‌ವೇರ್ ಲೋಕದ ನುರಿತ ತಂತ್ರಜ್ಞರ ನೇರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕೋಡಿಂಗ್ ಮತ್ತು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಅನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಿದೆ.
ಯಾರಿಗೆ ಈ ಕೋರ್ಸ್ ಸಂಜೀವಿನಿ? : ಕೇವಲ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ತಂತ್ರಜ್ಞಾನದ ಮೇಲೆ ಆಸಕ್ತಿಯಿರುವ ಯಾರಿಗಾದರೂ ಈ ಕೋರ್ಸ್ ಮುಕ್ತವಾಗಿದೆ, 10ನೇ ತರಗತಿ, ಪಿಯುಸಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳು, ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವವರು, ತಮ್ಮ ವೃತ್ತಿಜೀವನವನ್ನು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ರೂಪಿಸಿಕೊಳ್ಳಬಯಸುವ ಆಕಾಂಕ್ಷಿಗಳು ಇದರ ಪ್ರಯೋಜನ ಪಡೆಯಬಹುದು. ಉದ್ಯೋಗದಾತ ಸಂಸ್ಥೆಯಾಗಿ ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ನೂರಾರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಾವಿರಾರು ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ಉದ್ಯೋಗ ಕೊಡಿಸಿದ ಹೆಗ್ಗಳಿಕೆ ಹೊಂದಿದೆ. ಈಗ ಈ ಹೊಸ ಕೋರ್ಸ್ ಮೂಲಕ ವಿದ್ಯಾರ್ಥಿಗಳ ಕನಸಿನ ಉದ್ಯೋಗಗಳಿಗೆ ಬೇಕಾದ ತಾಂತ್ರಿಕ ಅಡಿಪಾಯವನ್ನು ಒದಗಿಸಲಿದೆ.









