ಕಲ್ಲುಗುಂಡಿ ಸಮೀಪದಲ್ಲಿ ಭಾರೀ ಕಾರು ಅಪಘಾತ – ಒಬ್ಬರಿಗೆ ಗಂಭೀರ ಗಾಯ

(ನ್ಯೂಸ್‌ ಕಡಬ) newskadaba.com,ಎ.03 ಸುಳ್ಯ:ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಲ್ಲುಗುಂಡಿ ಕೂಲಿಶೆಡ್ ಬೊಳುಗಲ್ಲು ಕಾಂಪ್ಲೆಕ್ಸ್ ಬಳಿಯ ಮೋರಿಗೆ ಡಿಕ್ಕಿ ಹೊಡೆದಿದೆ. ಕೇರಳದ ಮಲಪುರಂ ನಿವಾಸಿಗಳು ತಮ್ಮ ಊರಿಗೆ ತೆರಳುತ್ತಿದ್ದ ಕಾರಿನಲ್ಲಿ ಸುಮಾರು ಐದು ಮಂದಿ ಪ್ರಯಾಣಿಸುತ್ತಿದ್ದರು.

ಅವರಲ್ಲಿ ಓರ್ವರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ.

Scroll to Top