ನಾಳೆ (ಮಾ.29) ಕಡಬದಲ್ಲಿ ‘ಮಹರಾ ಗೋಲ್ಡ್’ ಶೋರೂಂ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಳೆದ ಹಲವು ವರ್ಷಗಳಿಂದ ಸುಳ್ಯದ ಬಸ್ ನಿಲ್ದಾಣದ ಬಳಿಯ ಸುಳ್ಯ ಸೆಂಟರ್ ನಲ್ಲಿ ಕಾರ್ಯಾಚರಿಸುತ್ತಿದ್ದ ಮಹರಾ ಗೋಲ್ಡ್ ನ ಎರಡನೇ ಶಾಖೆಯು ಕಡಬದ ಪಿ.ಕೆ. ಕಾಂಪ್ಲೆಕ್ಸ್ ನಲ್ಲಿ ಮಾರ್ಚ್ 29 ಭಾನುವಾರದಂದು ಶುಭಾರಂಭಗೊಳ್ಳಲಿದೆ.

ನೂತನ ಶೋರೂಂ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದ್ದು, 4.9% ವಿಶೇಷ ರಿಯಾಯಿತಿ ದರದಲ್ಲಿ ಚಿನ್ನಾಭರಣ ಸಿಗಲಿದೆ. ಪ್ರತೀ ಖರೀದಿ ಮೇಲೆ ಕೂಪನ್ ಲಭ್ಯವಿದ್ದು, ಹೋಂಡಾ ಆ್ಯಕ್ಟಿವಾ ಬಂಪರ್ ಬಹುಮಾನ ಸಿಗಲಿದೆ. ಮದುವೆ ಖರೀದಿಗೆ ವಿಶೇಷ ರಿಯಾಯಿತಿಯೊಂದಿಗೆ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶವಿದೆ.

ಶುಭಾರಂಭದಂದು ಮಳಿಗೆಗೆ ಭೇಟಿ ನೀಡಿ ಕೂಪನ್ ಭರ್ತಿ ಮಾಡಿದ್ದಲ್ಲಿ ಪ್ರತೀ ಗಂಟೆಗೊಮ್ಮೆ ನಡೆಯುವ ಡ್ರಾದಲ್ಲಿ ಸ್ಪೆಷಲ್ ಗಿಫ್ಟ್ ದೊರೆಯಲಿದೆ ಎಂದು ಮಹರಾ ಗೋಲ್ಡ್ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top