ಶ್ರೀ ಕ್ಷೇತ್ರ ಕೆಮ್ಮಲೆಯಲ್ಲಿ ಶ್ರೀ ಉಳ್ಳಾಕುಲು ನೇಮೋತ್ಸವಕ್ಕೆ ಸಜ್ಜು



(ನ್ಯೂಸ್‌ ಕಡಬ) newskadaba.com,  ಮಾ.28: ಶ್ರೀ ಕ್ಷೇತ್ರ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ ಹಾಗೂ ಬ್ರಹ್ಮ ಮೂಲಸ್ಥಾನ ಮತ್ತು ಉಳ್ಳಾಕುಲು ಪರಿವಾರ ದೈವಗಳ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಲಿವೆ.
ಬರುವ ಮಾರ್ಚ್ 31, 2026ರ ಮಂಗಳವಾರ ಶ್ರೀ ಉಳ್ಳಾಕುಲು ದೈವದ ನೇಮೋತ್ಸವವು ಅತ್ಯಂತ ಸಡಗರದಿಂದ ನಡೆಯಲಿದೆ. ಅಂದು ಕ್ಷೇತ್ರದ ದೈವಗಳ ನೇಮೋತ್ಸವದ ಅಂಗವಾಗಿ ವಿವಿಧ ಸಾಂಪ್ರದಾಯಿಕ ಕಟ್ಟುಕಟ್ಟಳೆಗಳು ನೆರವೇರಲಿವೆ.







ಬಳಿಕ ಏಪ್ರಿಲ್ 01, 2026ರ ಬುಧವಾರದಂದು ದೇವಸ್ಥಾನದ ವಾರ್ಷಿಕ ಮಹಾಪೂಜೆ ಹಾಗೂ ಸಾಮೂಹಿಕ ನಾಗತಂಬಿಲ ಸೇವೆಯು ಸಂಪನ್ನಗೊಳ್ಳಲಿದೆ. ನಾಗದೇವರ ಪ್ರೀತ್ಯರ್ಥವಾಗಿ ನಡೆಯುವ ಈ ವಿಶೇಷ ಸೇವೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕಡಬ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಹೆಮ್ಮಲೆ ಕ್ಷೇತ್ರದಲ್ಲಿ ನಡೆಯುವ ಈ ಎಲ್ಲಾ ಪವಿತ್ರ ಕಾರ್ಯಕ್ರಮಗಳಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವರ ಹಾಗೂ ದೈವಗಳ ಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಕ್ಷೇತ್ರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.






error: Content is protected !!
Scroll to Top