‘ತೈಲ ಬೆಲೆ ಏರಿಸುವ ಮೂಲಕ ಕೇಂದ್ರ ನಮ್ಮನ್ನ ಕೊಲೆ ಮಾಡ್ತಿದೆ’- ಡಿಕೆಶಿ

(ನ್ಯೂಸ್‌ ಕಡಬ) newskadaba.com,  ಮಾ.27 : ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡುತ್ತಿದೆ, ತೈಲ ಬೆಲೆ ಏರಿಕೆ ಮಾಡುತ್ತಿದೆ. ಈ ಬಗ್ಗೆ ಸುರ್ಜೇವಾಲಾ, ಸಿಎಂ ಅವರೊಂದಿಗೆ ಮಾತನಾಡ್ತೇನೆ” ಎಂದರು.

ಇನ್ನೂ ಐಪಿಎಲ್ ಟಿಕೆಟ್‌ಗೆ ಶಾಸಕರ ಬೇಡಿಕೆ ಕುರಿತು ಮಾತನಾಡಿದ ಅವರು, “ಶಾಸಕರ ಬೇಡಿಕೆ ಸರಿ ಇದೆ. ಶಾಸಕರು ಕೂಡ ವ್ಯವಸ್ಥೆಯ ಭಾಗ. ನಮ್ಮ ಶಾಸಕರಿಗೆ ವ್ಯವಸ್ಥೆ ಮಾಡಬೇಕು. ನಾನು ಕೆಎಸ್‌ಸಿಎ ಅಧ್ಯಕ್ಷರ ಜೊತೆ ಇಂದು ಮಾತಾಡ್ತೀನಿ” ಎಂದು ಹೇಳಿದರು.

Scroll to Top