ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಬಾಲಕನಿಗೆ ಕಿವಿ ಮರುಜೋಡಣೆ ಶಸ್ತ್ರಚಿಕಿತ್ಸೆ



(ನ್ಯೂಸ್‌ ಕಡಬ) newskadaba.com,  ಮಾ.27 : ಹದಿಮೂರರ ಹರೆಯದ ಬಾಲಕನಿಗೆ ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರು ಅತ್ಯಂತ ಸಂಕೀರ್ಣವಾದ ಕಿವಿ ಮರುಜೋಡನೆ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಘಟನೆಯ ವಿವರ: ಹುಟ್ಟಿನಿಂದ ‘ಮೈಕ್ರೋಟಿಯಾ’ ಸಮಸ್ಯೆಯಿಂದ ಬಳಲುತ್ತಿದ್ದ ೧೩ ವರ್ಷದ ಬಾಲಕನೊಬ್ಬನಿಗೆ ಒಂದು ಕಿವಿಯ ಗಾತ್ರ ಚಿಕ್ಕದಾಗಿತ್ತು. ಇದು ಕೇವಲ ದೈಹಿಕ ರೂಪದ ಮೇಲಲ್ಲದೆ, ಬಾಲಕನ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರಿತ್ತು. ಸುಧಾರಿತ ಚಿಕಿತ್ಸೆಗಾಗಿ ಕುಟುಂಬವು ಫಾದರ್ ಮುಲ್ಲರ್ ಆಸ್ಪತ್ರೆಯನ್ನು ಸಂಪರ್ಕಿ ಸಿತ್ತು. ಇಲ್ಲಿನ ನುರಿತ ಪ್ಲಾಸ್ಟಿಕ್ ಸರ್ಜರಿ ತಂಡವು ಬಾಲಕನ ಸ್ವಂತ ಪಕ್ಕೆಲುಬಿನ ಮೃದ್ವಸ್ಥಿಯನ್ನು ಬಳಸಿ ಕಿವಿಯನ್ನು ಮರುಸೃಷ್ಟಿಸುವ ಸವಾಲಿನ ಕಾರ್ಯವನ್ನು ಕೈಗೆತ್ತಿಕೊಂಡಿತು.
ಶಸ್ತ್ರಚಿಕಿತ್ಸೆಯ ಹಂತಗಳು:ಈ ಸಂಕೀರ್ಣ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಮೊದಲ ಹಂತದಲ್ಲಿ ರೋಗಿಯ ಪಕ್ಕೆಲುಬಿನಿಂದ ಮೃದ್ವಸ್ಥಿಯನ್ನು ತೆಗೆದು, ಅದನ್ನು ನೈಜ ಕಿವಿಯ ಆಕಾರಕ್ಕೆ ತಕ್ಕಂತೆ ಅತ್ಯಂತ ಸೂಕ್ಷ್ಮವಾಗಿ ಕತ್ತರಿಸಿ, ಕಿವಿಯ ಚೌಕಟ್ಟನ್ನು ಸಿದ್ಧಪಡಿಸಲಾಗಿತ್ತು.ಬಳಿಕ ಚರ್ಮದ ಗ್ರಾಫ್ಟ್ ಮೂಲಕ ಮೃದ್ವಸಿ ತೆಗೆದ ಜಾಗವನ್ನು ಮುಚ್ಚಲಾಗಿತ್ತು..





ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಅರವಿಂದ್ ರಾವ್ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಯಿತು. ಇವರಿಗೆ ಕನ್ಸಲ್ಟೆಂಟ್‌ಗಳಾದ ಡಾ. ಕಾರ್ತಿಕ್ ಐತಾಳ್ ಮತ್ತು ಡಾ. ಸಾಯಿ ಅನಂತಲಕ್ಷ್ಮಿ ಸಹಕರಿಸಿದ್ದರು. ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ರಾಧೇಶ್ ಹೆಗ್ಡೆ ಮತ್ತು ಡಾ. ಅಭಿರಾಮ್ ಶಾಸ್ತ್ರಿ ಅರಿವಳಿಕೆ ಸೇವೆ ನೀಡಿದರು. ಒಟಿ ಇನ್-ಚಾರ್ಜ್ ತಿ ರೇಷ್ಮಾ ನೇತೃತ್ವದ ಶುಶ್ರೂಷಕಿಯರ ತಂಡವು ಶಸ್ತ್ರಚಿಕಿತ್ಸೆಯ ಯಶಸ್ವಿಯಾಗಲು ಸಹಕಾರ ನೀಡಿದ್ದರು ಎಂದು ಫಾದರ್ ಮುಲ್ಲರ್ ಕಾಲೇಜು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.






error: Content is protected !!
Scroll to Top