(ನ್ಯೂಸ್ ಕಡಬ) newskadaba.com, ಮಾ.23 : ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಳುಮೆಣಸು ಹಾಗೂ ರಬ್ಬರ್ ಮಾರುಕಟ್ಟೆಯ ಇಂದಿನ (ಮಾರ್ಚ್ 23, ಸೋಮವಾರ) ಸ್ಥಿತಿಗತಿಗಳ ಕುರಿತು ಕ್ಯಾಂಪ್ಕೋ ನಿಯಮಿತ ಮಂಗಳೂರು (ಸುಳ್ಯ ಶಾಖೆ) ಅಧಿಕೃತ ದರಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೃಷಿಕರ ಅನುಕೂಲಕ್ಕಾಗಿ ಇಂದಿನ ಮಾರುಕಟ್ಟೆ ದರಗಳ ವಿವರವಾದ ಮಾಹಿತಿ ಈ ಕೆಳಗಿನಂತಿದೆ:
ಅಡಿಕೆ ಮಾರುಕಟ್ಟೆ ಧಾರಣೆ
ಅಡಿಕೆಯ ಗಾತ್ರ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಇಂದಿನ ದರಗಳು ಹೀಗಿವೆ:
ಹೊಸ ಅಡಿಕೆ: ₹260 ರಿಂದ ₹460 ವರೆಗೆ
ಹಳೆ ಅಡಿಕೆ: ₹395 ರಿಂದ ₹530 ವರೆಗೆ
ಡಬಲ್ ಚೋಲ್: ₹390 ರಿಂದ ₹530 ವರೆಗೆ
ಫಟೋರ: ₹280 ರಿಂದ ₹405 ವರೆಗೆ
ಉಳ್ಳಿಗಡ್ಡೆ: ₹165 ರಿಂದ ₹285 ವರೆಗೆ
ಕರಿಗೋಟು: ₹230 ರಿಂದ ₹260 ವರೆಗೆ
ಇತರೆ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು ₹560 – ₹660
ಹಸಿ ಕೊಕ್ಕೋ ₹70 – ₹100
ಒಣ ಕೊಕ್ಕೋ ₹270 – ₹300
ಕೊಬ್ಬರಿ : ₹150 – ₹170
ರಬ್ಬರ್ ಮಾರುಕಟ್ಟೆ ಧಾರಣೆ
ಗ್ರೇಡ್ : ₹212.00
ಲಾಟ್ : ₹188.00
ಸ್ಕ್ರ್ಯಾಪ್ 1ನೇ ದರ್ಜೆ ₹127.00
ಸ್ಕ್ರ್ಯಾಪ್ 2ನೇ ದರ್ಜೆ ₹119.00
ಕೃಷಿಕರ ಗಮನಕ್ಕೆ
ಈ ಮೇಲಿನ ಧಾರಣೆಗಳು ಇಂದಿನ ಮಾರುಕಟ್ಟೆಯ ಸ್ಥಿತಿಗತಿ ಹಾಗೂ ಉತ್ಪನ್ನಗಳ ಗುಣಮಟ್ಟ ಮತ್ತು ತೇವಾಂಶವನ್ನು ಆಧರಿಸಿರುತ್ತದೆ. ವಿವಿಧ ಸಹಕಾರಿ ಸಂಸ್ಥೆಗಳು ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ ಅಥವಾ ಮಾರುಕಟ್ಟೆ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.









