ಉಪ್ಪಿನಂಗಡಿ, ಮುಂಡಾಜೆಯಲ್ಲಿ ತಡವಾಗಿ ಆರಂಭವಾದ ಮತದಾನ ​► ಹೆಚ್ಚುವರಿ ಸಮಯಾವಕಾಶ‌ ನೀಡಲು ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.12. ಜಿಲ್ಲೆಯ ಕೆಲವೆಡೆ ಮತ ಯಂತ್ರಗಳಲ್ಲಿ ದೋಷ ಕಂಡುಬಂದಿದ್ದು, ತಡವಾಗಿ ಮತದಾನ ಆರಂಭವಾಗಿದೆ.

ಉಪ್ಪಿನಂಗಡಿ ಒಂದನೇ ವಾರ್ಡ್‌ನ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದಾಗಿ ಮತ ಯಂತ್ರವನ್ನು ಬದಲಾಯಿಸಲಾಗಿದ್ದು, ಒಂದು ಗಂಟೆ ವಿಳಂಬವಾಗಿ ಮತದಾನ ಆರಂಭವಾಯಿತು. ಮತದಾರರು ಕಾದು ಕಾದು ಮತಗಟ್ಟೆಯಿಂದ ಹಿಂತಿರುಗುತ್ತಿರುವ ದೃಶ್ಯ ಕಂಡುಬಂತು. ವಿಳಂಬವಾಗಿ ಮತದಾನ ಆರಂಭವಾಗಿದ್ದರಿಂದ ಮತದಾರರು ಒಂದು ಗಂಟೆ ಹೆಚ್ಚುವರಿ ಸಮಯಾವಕಾಶ ನೀಡಲು ಆಗ್ರಹಿಸಿದರು. ಮುಂಡಾಜೆ ಮೂರನೇ ವಾರ್ಡ್‌ನಲ್ಲೂ ಮತಯಂತ್ರದ ತೊಂದರೆಯಿಂದಾಗಿ ಅರ್ಧ ಗಂಟೆ ತಡವಾಗಿ ಮತದಾನವಾಯಿತು.

Also Read  ಖಾಸಗಿ ಬಸ್ ಪಲ್ಟಿ ➤ ಹಲವರಿಗೆ ಗಾಯ

error: Content is protected !!
Scroll to Top