ವಾಣಿಜ್ಯ ವಿದ್ಯುತ್‌ ದರ ಹೆಚ್ಚಳ- ಯುನಿಟ್‌ಗೆ 10ರಿಂದ 95 ಪೈಸೆ ಏರಿಕೆ



(ನ್ಯೂಸ್‌ ಕಡಬ) newskadaba.com,  ಮಾ.05: ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) 2025-26ನೇ ಸಾಲಿಗೆ ಅನ್ವಯವಾಗುವಂತೆ ನಿಗದಿಪಡಿಸಿದ್ದ ವಿದ್ಯುತ್‌ ದರಗಳನ್ನು ಪರಿಷ್ಕರಿಸಿದ್ದು, ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್‌ ದರವನ್ನು ಪ್ರತಿ ಯುನಿಟ್‌ಗೆ 10 ಪೈಸೆಯಿಂದ ಗರಿಷ್ಠ 95 ಪೈಸೆವರೆಗೆ ಹೆಚ್ಚಳ ಮಾಡಲಾಗಿದೆ. ಇನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಬಳಸುವ ವಿದ್ಯುತ್‌ ದರವನ್ನು ಯೂನಿಟ್‌ಗೆ ಸರಾಸರಿ 95 ಪೈಸೆಯಷ್ಟು ಕಡಿಮೆ ಮಾಡಿದೆ.





2025-26ನೇ ಸಾಲಿಗೆ ಅನ್ವಯವಾಗುವಂತೆ ವಿದ್ಯುತ್‌ ದರ ಪರಿಷ್ಕರಣೆ ವೇಳೆ ಕೆಇಆರ್‌ಸಿಯು ಕೈಗಾರಿಕೆ, ವಾಣಿಜ್ಯ ಬಳಕೆಯ ವಿದ್ಯುತ್‌ಗೆ ನಿಗದಿ ಮಾಡಿರುವ ದರ ಸರಿಯಿಲ್ಲ ಎಂದು ಎಸ್ಕಾಂಗಳು ಮೇಲ್ಮನವಿ ಸಲ್ಲಿಸಿದ್ದವು.






ಅದರಂತೆ ಕೆಇಆರ್‌ಸಿಯು ಪರಿಷ್ಕೃತ ದರಗಳನ್ನು ಪ್ರಕಟಿಸಿದ್ದು, ಇದು ಯಾವಾಗ ಜಾರಿಯಾಗಲಿದೆ ಎಂಬ ಬಗ್ಗೆ ಆದೇಶದಲ್ಲಿ ಸ್ಪಷ್ಟತೆ ನೀಡಿಲ್ಲ.

ದರ ಪಟ್ಟಿ

ವರ್ಗ- ಹಾಲಿ ದರ – ಪರಿಷ್ಕೃತ ದರ

ಎಲ್‌ಟಿ-3 (ಎ) ವಾಣಿಜ್ಯ – 7 ರು. – 7.10 ರು.

ಎಲ್‌ಟಿ -5 (ಕೈಗಾರಿಕೆ) – 4.50 ರು. – 5.20 ರು.

ಎಚ್‌ಟಿ 2 ಎ (ಕೈಗಾರಿಕೆ) – 6.60 ರು. – 6.70 ರು.

ಎಚ್‌ಟಿ 2ಬಿ (ವಾಣಿಜ್ಯ) – 5.95 – 6.90

error: Content is protected !!
Scroll to Top