(ನ್ಯೂಸ್ ಕಡಬ) newskadaba.com, ಮಾ.04 : ಬೈಕ್‌ನಲ್ಲಿ ಬಂದ ಸವಾರ ದರ್ಬೆ ಸಮೀಪ ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂರ್ನಡ್ಕ ನಿವಾಸಿ ಅಬ್ದುಲ್ ಹಕೀಂ ದೂರುದಾರರು. ಅವರು ದರ್ಬೆಯಲ್ಲಿ ಕಾರು ನಿಲ್ಲಿಸಿ ರಿಕ್ಷಾ ಚಾಲಕರ ಮಧ್ಯೆ ನಡೆದ ಮಾತಿನ ಚಕಮಕಿಯನ್ನು ಸಮಾಧಾನಿಸಿ ಹಿಂದಿರುಗಿ ಹೊರಡುವ ಸಂದರ್ಭ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಅಪರಿಚಿತ ವ್ಯಕ್ತಿ ಪಿಸ್ತೂಲ್ ತೋರಿಸಿ ಬೆದರಿಸಿದಾಗ ಹಕೀಂ ಮತ್ತು ಇತರರು ಸೇರಿ ಆತನನ್ನು ಹಿಡಿಯಲು ಹೋದಾಗ ವ್ಯಕ್ತಿ ಬೈಕ್ ಮೂಲಕ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.








