ಪರೀಕ್ಷೆಗೆ ಮುನ್ನವೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ



(ನ್ಯೂಸ್ಕಡಬ) newskadaba.com,  ಫೆ.28:  ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು  ಪರೀಕ್ಷೆಗೂ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪಿರುವ ದುರದೃಷ್ಟಕರ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು 17 ವರ್ಷ ಎಂದು ಗುರುತಿಸಲಾಗಿದೆ. ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಇದ್ದ ಕಾರಣ,ಬೆಳಗ್ಗೆಯಿಂದಲೇ ಪರೀಕ್ಷೆಗೆ ಉತ್ಸಾಹದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು.





ಸ್ನಾನ ಮುಗಿಸಿ ಮನೆಯಿಂದ ಹೊರಬರುತ್ತಿದ್ದ ಸನ್ನಿವೇಶದಲ್ಲಿ ಆಕೆಗೆ ದಿಢೀರ್ ಆಗಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಆತಂಕಗೊಂಡ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಭೂಮಿಕಾ ಕೊನೆಯುಸಿರೆಳೆದಿದ್ದಾಳೆ.






ಶೈಕ್ಷಣಿಕ ಜೀವನದ ಪ್ರಮುಖ ಪರೀಕ್ಷೆಯನ್ನು ಎದುರಿಸಬೇಕಿದ್ದ ವಿದ್ಯಾರ್ಥಿನಿ, ವಿಧಿಯಾಟಕ್ಕೆ ಬಲಿಯಾಗಿರುವುದು ಪೋಷಕರನ್ನು ಶೋಕದ ಮಡಿಲಲ್ಲಿ ಕೆಡವಿದೆ. ಪರೀಕ್ಷೆಯ ಒತ್ತಡವೋ ಅಥವಾ ಆರೋಗ್ಯದ ಏರುಪೇರೋ ಯಾವುದು ಈ ಸಾವಿಗೆ ಕಾರಣ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಬಂಬಲವಾಡ ಗ್ರಾಮದಲ್ಲಿ ಶೋಕಮಯ ವಾತಾವರಣ ನಿರ್ಮಾಣವಾಗಿದೆ.

error: Content is protected !!
Scroll to Top