ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಚಿನ್ನದ ದರದಲ್ಲಿ ಭಾರೀ ಹೆಚ್ಚಳ – News Kadaba

ಚಿನ್ನದ ದರದಲ್ಲಿ ಭಾರೀ ಹೆಚ್ಚಳ

(ನ್ಯೂಸ್‌ ಕಡಬ) newskadaba.com,  ಫೆ.28:  ಕೆಲವು ದಿನಗಳಿಂದ ಏರಿಕೆಯ ಹಾದಿಯಲ್ಲಿರುವ ಚಿನ್ನದ ದರ ಇಂದು ಕೂಡ ಗಗನಮುಖಿಯಾಗಿದೆಯಾಗಿದೆ. ಶನಿವಾರ ಆಭರಣಪ್ರಿಯರ ನಿದ್ದೆಗೆಡಿಸಿ ಹಳದಿಲೋಹದ ಬೆಲೆ ಭಾರಿ ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 290 ರುಪಾಯಿ ಏರಿಕೆಯಾಗಿ 15,100 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 316 ಅಧಿಕವಾಗಿದ್ದು, 16,473 ರುಪಾಯಿ ಇದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,20,800 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,51,000 ರುಪಾಯಿ ಹಾಗೂ 100 ಗ್ರಾಂಗೆ ನೀವು 15,10,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,31,784 ರುಪಾಯಿ ಹಾಗೂ 10 ಗ್ರಾಂಗೆ ನೀವು 1,64,730 ರುಪಾಯಿ ಹಾಗೂ 100 ಗ್ರಾಂಗೆ ನೀವು 16,47,300 ರುಪಾಯಿ ನೀಡಬೇಕಾಗುತ್ತದೆ.

.

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 15,200 ರುಪಾಯಿ 16,582 ರುಪಾಯಿ
ಮುಂಬೈ 15,100 ರುಪಾಯಿ 16,473 ರುಪಾಯಿ
ದೆಹಲಿ 15,115 ರುಪಾಯಿ 16,488 ರುಪಾಯಿ
ಕೋಲ್ಕತ್ತಾ 15,100 ರುಪಾಯಿ 16,473 ರುಪಾಯಿ
ಹೈದರಾಬಾದ್‌ 15,100 ರುಪಾಯಿ 16,473 ರುಪಾಯಿ

ಬೆಳ್ಳಿ ದರ

ಬೆಳ್ಳಿ ದರದಲ್ಲಿಯೂ ಇಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 10 ರುಪಾಯಿ ಹೆಚ್ಚಾಗಿದ್ದು, 295 ರುಪಾಯಿಗೆ ತಲುಪಿದೆ. 10 ಗ್ರಾಂ ಬೆಳ್ಳಿಗೆ 2,950 ರುಪಾಯಿ ಹಾಗೂ 1 ಕೆಜಿಗೆ 2,95,000 ರುಪಾಯಿ ಇದೆ.

Scroll to Top