(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 28. ಪಂಚಾಯತ್ ನೀರಿನ ಟ್ಯಾಂಕ್ ಮೀಟರ್ ಸರಿಪಡಿಸುತ್ತಿದ್ದ ಸಂದರ್ಭ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಪಟ್ಟಣ ಪಂಚಾಯತ್ ನೀರಿನ ನೌಕರ ರೊನಾಲ್ಡ್ ಸಂಜಯನಗರ ಎಂಬವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ಕೋರ್ಟ್ ಅವರಣದಲ್ಲಿ ನಡೆದಿದೆ.
ಇದನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತರಾದ ಮುಳುಗು ತಜ್ಞ ಇಸ್ಮಾಯಿಲ್ ಸಂಜಯನಗರ ಅವರು ಕೂಡಲೇ ರಕ್ಷಣಾ ಕಾರ್ಯಕ್ಕೆ ಧಾವಿಸಿ ಹೆಜ್ಜೇನನ್ನು ಓಡಿಸಿ ನೌಕರನನ್ನು ನೀರಿನ ಟ್ಯಾಂಕಿನ ಮೇಲಿಂದ ಕೆಳಗಿಳಿಸಿ ರಕ್ಷಿಸಿದ್ದಾರೆ. ಗಂಭೀರ ಗಾಯಗೊಂಡಿರುವ ನೌಕರ ರೊನಾಲ್ಡ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ರಕ್ಷಣಾ ಕಾರ್ಯದಲ್ಲಿ ಬೆಳ್ತಂಗಡಿ ಸಂಜಯನಗರ ನಿವಾಸಿಗಳಾದ ಅಕ್ಬರ್ ಬೆಳ್ತಂಗಡಿ, ರಶೀದ್ ಬೆಳ್ತಂಗಡಿ, ಬದ್ರು ಮಟ್ಲ, ಶಫೀರ್ ಸಂಜಯನಗರ, ಇರ್ಫಾನ್ ಬೆಳ್ತಂಗಡಿ, ಶರೀಫ್ ಸಂಜಯನಗರ ಹಾಗೂ ಪಟ್ಟಣ ಪಂಚಾಯತ್ ನೌಕರರಾದ ಫ್ರಾನ್ಸಿಸ್ ಬೆಳ್ತಂಗಡಿ ಪಾಲ್ಗೊಂಡಿದ್ದರು.








