ಪಂಚ್ ಕೋತಿಯಿಂದ ಸಮಾಜಕ್ಕೆ ‘ಪಂಚ್’; ಗಮನ ಸೆಳೆಯುತ್ತಿದೆ ಈ ಕ್ಯೂಟ್ ಅಂಬಾಸಿಡರ್

(ನ್ಯೂಸ್‌ ಕಡಬ) newskadaba.com,ಫೆ.27 : ಮುಂಬೈ ಪೊಲೀಸ್ ಇಲಾಖೆ ತುರ್ತು ಸಹಾಯವಾಣಿ 112 ಬಗ್ಗೆ ಜಾಗೃತಿ ಮೂಡಿಸಲು ಜಪಾನಿನ ಕೋತಿ ಪಂಚ್‌ನನ್ನು ಬಳಸಿದ್ದಾರೆ. ತನ್ನ ಮುಗ್ಧತೆಯ ಮೂಲಕ ಹೆಸರುವಾಸಿಯಾದ ಪಂಚ್ ಕೋತಿ ಇದೀಗ ಸಾಮಾಜಿಕ ಜವಾಬ್ದಾರಿ ಹೊತ್ತಿದೆ.

​ ​ ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿ ಹುಟ್ಟಿದ ಪಂಚ್, ತಾಯಿಯಿಂದ ದೂರಾಗಿ ಒಬ್ಬಂಟಿಯಾಗಿತ್ತು. ಅಲ್ಲಿನ ಉಳಿದ ಕೋತಿಗಳಿಂದ ಹಿಂಸೆ ಅನುಭವಿಸುತ್ತಿದ್ದರೂ, ಪಂಚ್ ಸದಾ ಗೊಂಬೆಯೊಂದರ ಜತೆ ಇರುತ್ತಿತ್ತು. ಈ ಕಷ್ಟಕರ ಅನುಭವವನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು 112 ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಅದನ್ನು ಬಳಕೆ ಮಾಡಿದ್ದಾರೆ ಎನ್ನಲಾಗಿದೆ.

ಪಂಚ್ ಬಳಸಿದ ಪೋಸ್ಟ್‌ನಲ್ಲಿ “ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತನಾಡಬೇಡ” ಎಂಬ ಸಂದೇಶ ಮೂಡಿ, ನಾಗರಿಕರಿಗೆ ಜವಾಬ್ದಾರಿಯುತವಾಗಿ ವರ್ತಿಸಲು ಕರೆ ನೀಡುತ್ತದೆ.ಪೋಸ್ಟ್‌ನಲ್ಲಿ ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯೊಬ್ಬರು ಯುವ ಕೋತಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯವು ಕೂಡ ನೀಡಲಾಗಿದೆ. 112 ಸಹಾಯವಾಣಿ, ಭಾರತದಲ್ಲಿ ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತಕ್ಷಣದ ಪ್ರವೇಶ ಒದಗಿಸುವ ಏಕೈಕ ತುರ್ತು ಪ್ರತಿಕ್ರಿಯೆ ಸಂಖ್ಯೆ ಎಂದು ದಾಖಲಾಗಿದೆ.

Scroll to Top