ಮಂಜೇಶ್ವರ : ವ್ಯಕ್ತಿಯ ಅಪಹರಣ- ನಾಲ್ಕು ಮಂದಿ ಆರೆಸ್ಟ್



(ನ್ಯೂಸ್‌ ಕಡಬ) newskadaba.com,ಫೆ.24: ವ್ಯಕ್ತಿ ಯೋರ್ವನನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿದ ಘಟನೆ ಮಂಜೇಶ್ವರದ ಪಾವೂರು ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ ನಾಲ್ವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 20 ರಂದು ರಾತ್ರಿ ಘಟನೆ ನಡೆದಿತ್ತು. ಪಾವೂರು ಕೊಂಬಗುಡಿಯ ಅಬ್ದುಲ್ ರಹಮಾನ್ ಎಂಬವರನ್ನು ರಾತ್ರಿ 10.30 ರ ಸುಮಾರಿಗೆ ಕಾರಿನಲ್ಲಿ ಬಂದ ತಂಡವೊಂದು ಬಲವಂತವಾಗಿ ಅಪಹರಿಸಿತ್ತು. ಈ ಬಗ್ಗೆ ಪತ್ನಿ ತಾಹಿರಾ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.





ಘಟನೆಗೆ ಸಂಬಂಧಪಟ್ಟಂತೆ ಪಾವೂರು ಕುಂಡಾಪು ವಿನ ಗಫೂರ್ (29) , ಮಚ್ಚoಪಾಡಿಯ ಅಬೂಬಕ್ಕರ್ ಅನಾಸ್ (27), ಮುಹಮ್ಮದ್ ಶಿಹಾಬ್ (42) , ಬಂಟ್ವಾಳದ ಮುಹಮ್ಮದ್ ರಫೀಕ್ (27) ನನ್ನು ಬಂಧಿಸಲಾಗಿದೆ.ಚಿನ್ನಾಭರಣ ವ್ಯವಹಾರಕ್ಕೆ ಸಂಬಂಧಪಟ್ಟಂತೆ ತಂಡವು ಈ ಕೃತ್ಯ ನಡೆಸಿದೆ ಎನ್ನಲಾಗಿದೆ. ಅಬ್ದುಲ್ ರಹಮಾನ್ ರನ್ನು ತಂಡವು ಮೈಸೂರಿಗೆ ಕರೆದುಕೊಂಡು ಹೋಗಿದ್ದು, ಬಳಿಕ ಮರಳಿ ಕರೆದುಕೊಂಡು ಬರುತ್ತಿದ್ದಾಗ ಮಂಜೇಶ್ವರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.






ಅಬ್ದುಲ್ ರಹಮಾನ್ ರವರು ತಮ್ಮ ಮಗನ ವ್ಯಾಪಾರಕ್ಕಾಗಿ ಆರೋಪಿ ಗಳಲ್ಲಿ ಒಬ್ಬನ ಸಹೋದರಿಯ ಚಿನ್ನಾಭರಣ ಪಡೆದಿದ್ದು, ಇದನ್ನು ವರ್ಷಗಳಾದರೂ ಮರಳಿಸದ ಹಿನ್ನಲೆಯಲ್ಲಿ ತಂಡವು ಅಪಹರಿಸಿದ್ದು , ಮೈಸೂರಿನಲ್ಲಿ ಚಿನ್ನ ಮರಳಿಸುವ ಬಗ್ಗೆ ಎರಡೂ ತಂಡಗಳು ಒಪ್ಪಂದಕ್ಕೆ ಬಂದಿದ್ದರು ಎನ್ನಲಾಗಿದೆ.ಬಳಿಕ ತಂಡವು ಅಬ್ದುಲ್ ರಹಮಾನ್ ರನ್ನು ಊರಿಗೆ ಕರೆದುಕೊಂಡು ಬರುತ್ತಿದ್ದಾಗ ದಾರಿ ಮಧ್ಯೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

error: Content is protected !!
Scroll to Top