ಇಂದಿನ ಚಿನ್ನದ ದರ



(ನ್ಯೂಸ್‌ ಕಡಬ) newskadaba.com,ಫೆ.24: ಜಾಗತಿಕ ಮಾರುಕಟ್ಟೆಗಳ ಏರಿಳಿತದಿಂದ ಚಿನ್ನ ಬೆಳ್ಳಿ ದರದಲ್ಲೂ ಏರಿಳಿತ ಕಂಡುಬರುತ್ತಿದೆ. ಚಿನ್ನದ ದರದಲ್ಲಿ ಹಾಗೂ ಬೆಳ್ಳಿಯಲ್ಲಿ ಇಂದು ಕುಸಿತ ಉಂಟಾಗಿದೆ.





ಅಮೆರಿಕದ ಡಾಲರ್ ನಿಂದಾಗಿ ಒತ್ತಡಕ್ಕೊಳಗಾಗಿ, ಮೌಲ್ಯ ಹೆಚ್ಚಾಗಿದ್ದರಿಂದ ಲೋಹಗಳ ಬೆಲೆ ಇಳಿಕೆ ಆಗಿದೆ. ಪ್ರತಿಸುಂಕ ಹಾವಳಿ, ಅಮೆರಿಕ-ಇರಾನ್ ಸಂಘರ್ಷದ ನಡುವೆಯೂ ಡಾಲರ್ ಬಲಗೊಂಡ ಕಾರಣ ಚಿನ್ನ ಬೆಳ್ಳಿ ದರ ಕುಸಿದಿದೆ. ಆದರೆ ಈ ಇಳಿಕೆ ತಾತ್ಕಾಲಿಕವಾಗಿದ್ದು ಮತ್ತೆ ಬೆಲೆ ಏರಿಳಿತ ಕಾಣುವ ಸಾಧ್ಯತೆ ಇದೆ.






ಚಿನ್ನದ ಇಂದಿನ ದರ ಎಷ್ಟಿದೆ?
ಫೆಬ್ರವರಿ 24 2026, ಮಂಗಳವಾರದಂದು ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಮಂಗಳವಾರ ಬೆಲೆ ಕುಸಿತ ಕಾಣಿಸಿದೆ. ಚಿನ್ನದ ದರ 1.5% ಇಳಿದಿದೆ. 998 ರೂಪಾಯಿ ಚಿನ್ನದ ಬೆಲೆ ಕುಸಿದಿದ್ದು, 1,60,628 ರೂಪಾಯಿ ದಾಖಲಾಗಿದೆ. ಬೆಳ್ಳಿ ದರ 3% ಇಳಿದಿದೆ. ಕೆಜಿ ಬೆಳ್ಳಿ ಬೆಲೆ ಈಗ 2,64,327 ರೂ ಆಗಿದೆ.

error: Content is protected !!
Scroll to Top