ಈಜಲು ಹೋಗಿದ್ದ ಯುವಕನಿಗೆ ಕಾಡಿದ ವಾರಾಹಿ ಹೊಳೆ: 6 ದಿನಗಳ ಹೋರಾಟ ಅಂತ್ಯ!”



(ನ್ಯೂಸ್ಕಡಬ) newskadaba.com,ಫೆ.23: ಉಡುಪಿ ಜಿಲ್ಲೆಯ ಅಮಾಸೆಬೈಲು ಸಮೀಪದ ತೊಂಬಟ್ಟು ವಾರಾಹಿ ಹೊಳೆಯಲ್ಲಿ ಈಜಲು ಹೋಗಿ ಮುಳುಗಿದ್ದ ಯುವಕ ಸುಧೀರ್ (26) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಉಳ್ಳೂರು-74 ಗ್ರಾಮದ ಭುಜಂಗ ಶೆಟ್ಟಿ ಅವರ ಪುತ್ರ.





​ಫೆಬ್ರವರಿ 15ರಂದು: ಸುಧೀರ್ ಅವರು ಹೊಸಂಗಡಿ ಗ್ರಾಮದ ಭಾಗೀಮನೆ ಎಂಬಲ್ಲಿ ವಾರಾಹಿ ಹೊಳೆಗೆ ಈಜಲು ಹೋಗಿದ್ದರು. ಈಜು ಸರಿಯಾಗಿ ಬಾರದ ಕಾರಣ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದರು.






​ ತಕ್ಷಣವೇ ಅವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಇವರು ಶನಿವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಅಕಾಲಿಕ ನಿಧನಕ್ಕೆ ಗ್ರಾಮದಲ್ಲಿ ಶೋಕ ವ್ಯಕ್ತವಾಗಿದೆ.

error: Content is protected !!
Scroll to Top