ಕಡಬ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ



ಕಡಬ, ಫೆ.14. ಇಲ್ಲಿನ ನೆಟ್ಟಣದ ಕಲಾ ಫ್ಯಾನ್ಸಿ ಮಾಲಕ‌ ತಿಮ್ಮಪ್ಪ ಗೌಡ(50) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ಬೆಳಕಿಗೆ ಬಂದಿದೆ.





ಬಿಳಿನೆಲೆ ಗ್ರಾಮದ ಮದೆಪೆರ್ಲ ನಿವಾಸಿಯಾಗಿರುವ ಅವರು ಶನಿವಾರ ಮಧ್ಯಾಹ್ನ ಮನೆಯಿಂದ ಹೊರಟು ಮನೆ ಸಮೀಪದ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಜೆ ವೇಳೆಗೆ ವಿಚಾರ ತಿಳಿದಿದ್ದು, ಘಟನೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.






error: Content is protected !!
Scroll to Top