ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಉಡುಪಿ ನಗರಸಭೆಗೆ ತೆರಿಗೆ ವಂಚನೆ: ನಕಲಿ ಬ್ಯಾಂಕ್ ಸೀಲ್ ಬಳಸಿ ಹಣ ಲೂಟಿ – News Kadaba

ಉಡುಪಿ ನಗರಸಭೆಗೆ ತೆರಿಗೆ ವಂಚನೆ: ನಕಲಿ ಬ್ಯಾಂಕ್ ಸೀಲ್ ಬಳಸಿ ಹಣ ಲೂಟಿ

(ನ್ಯೂಸ್‌ ಕಡಬ) newskadaba.com,  ಫೆ.13 ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಪಾವತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಯೂನಿಯನ್ ಬ್ಯಾಂಕ್‌ನ ನಕಲಿ ಸೀಲು ಬಳಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರಸಭೆ ಪೌರಾಯುಕ್ತರಾದ ಮಹಾಂತೇಶ್ ಹಂಗರಗಿ ಅವರು ಫೆಬ್ರವರಿ 3ರಂದು ತೆರಿಗೆ ಪಾವತಿಗಳ ಮರುಪರಿಶೀಲನೆ ನಡೆಸುತ್ತಿದ್ದಾಗ ಈ ಜಾಲ ಪತ್ತೆಯಾಗಿದೆ. ಜನವರಿ 28ರಂದು ಬ್ಯಾಂಕ್ ಸೀಲು ಹೊಂದಿದ್ದ ಚಲನ್ ದಾಖಲೆಯಲ್ಲಿದ್ದರೂ, ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ಆ ಹಣ ಜಮೆಯಾಗಿರಲಿಲ್ಲ. ಫೆಬ್ರವರಿ 4ರಂದು ಮತ್ತೆ ತಪಾಸಣೆ ನಡೆಸಿದಾಗ, ಒಂದೇ ಚಲನ್ ಸಂಖ್ಯೆಯನ್ನಿಟ್ಟುಕೊಂಡು ಬೇರೆ ಬೇರೆ ದಿನಾಂಕದ ನಕಲಿ ಸೀಲುಗಳನ್ನು ಒತ್ತಿರುವುದು ಪತ್ತೆಯಾಗಿದೆ.

ಪೌರಾಯುಕ್ತರ ದೂರಿನ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈ ಹಗರಣದ ಹಿಂದೆ ನಗರಸಭೆಯ ಒಳಗಿನವರ ಕೈವಾಡವಿದೆಯೇ ಅಥವಾ ಹೊರಗಿನ ಏಜೆಂಟ್‌ಗಳ ಸಂಚಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ..

 

Scroll to Top