ಮಂಗಳೂರು : ಅರಸು ಪದವು ಗುಡ್ಡದಲ್ಲಿ ಮತ್ತೆ ಬೆಂಕಿ – ಕಾರ್ಯಾಚರಣೆ

(ನ್ಯೂಸ್‌ ಕಡಬ) newskadaba.com,ಫೆ,03 ಮಂಗಳೂರು: ಬಜಪೆಯ ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅರಸುಪದವಿನಲ್ಲಿನ ಗುಡ್ಡಕ್ಕೆ ಸೋಮವಾರ ಮುಂಜಾನೆ ಪುನಃ ಬೆಂಕಿ ಕಾಣಿಸಿಕೊಂಡಿದೆ.

ಫೆ. 1ರಂದು ಗುಡ್ಡದಲ್ಲಿ ಹರಡಿದ ಬೆಂಕಿಯನ್ನು ಆಗ್ನಿಶಾಮಕದಳದ ಸತತ ಕಾರ್ಯಾಚರಣೆ ಮೂಲಕ ಹತೋಟಿಗೆ ತಂದು ನಂದಿಸಲಾಗಿತ್ತು. ಸೋಮವಾರ ಮುಂಜಾನೆಯೇ ಬೆಂಕಿ ಕಂಡು ಬಂದ ಕಾರಣ ಇದು ಗುಡ್ಡದ ಸಮೀಪದಲ್ಲಿಯೇ ಹಾಗೂ ಕೆಳಗಡೆಗೆ ವ್ಯಾಪಿಸುವ ಭೀತಿ ಇದ್ದು ,ಅಲ್ಲಿನ ಮನೆ ಗಳಿಗೆ ನಿವಾಸಿಗಳಿಗೆ ಅಪಾಯ ತಂದಿದೆ.

ಈ ಬಗ್ಗೆ ಅಗ್ನಿಶಾಮಕ ದಳ ಆಗಮಿಸಿದ್ದು ಬೆಂಕಿಯನ್ನು ನಂದಿಸಲಾಗಿತ್ತು. ಮತ್ತೆ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು,ಮತ್ತೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಲಾಗಿದೆ.

Scroll to Top