ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಬೆಳ್ತಂಗಡಿ : ಹೆದ್ದಾರಿ ಬದಿ ನಿಂತಿದ್ದ ಇಬ್ಬರಿಗೆ ಕಾರು ಢಿಕ್ಕಿ – ಗಂಭೀರ ಗಾಯ – News Kadaba

ಬೆಳ್ತಂಗಡಿ : ಹೆದ್ದಾರಿ ಬದಿ ನಿಂತಿದ್ದ ಇಬ್ಬರಿಗೆ ಕಾರು ಢಿಕ್ಕಿ – ಗಂಭೀರ ಗಾಯ

(ನ್ಯೂಸ್‌ ಕಡಬ) newskadaba.com,ಫೆ,02 ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ಚಾಲಕನ ಅಜಾಗರೂಕತೆಯ ಚಾಲನೆಯ ಪರಿಣಾಮ ಕಾರೊಂದು ಢಿಕ್ಕಿಯಾಗಿ ಹೆದ್ದಾರಿ ಬದಿ ನಿಂತಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ರವಿವಾರ ನಡೆದಿದೆ.

ಸ್ಥಳೀಯ ನಿವಾಸಿಗಳಾದ ಉಮೇಶ(49) ಹಾಗೂ ಸೀನಪ್ಪ ಪೂಜಾರಿ(60) ಗಾಯಗೊಂಡಿದ್ದು, ಇಬ್ಬರೂ ಸಂಬಂಧಿಕರಾಗಿದ್ದಾರೆ. ಅವರು ಕಕ್ಕಿಂಜೆಯ ಆಯಿಲ್ ಮಿಲ್ ಬಳಿ ರವಿವಾರ ಮಧ್ಯಾಹ್ನ 12.30ರ ಸುಮಾರಿಗೆ ಮನೆಗೆ ತೆರಳಲು ಆಟೋ ರಿಕ್ಷಾಕ್ಕೆ ಕಾಯುತ್ತಿದ್ದ ವೇಳೆ ಘಟನೆ ನಡೆದಿದೆ. ಚಾಲಕ ಹರ್ಷನ್ ಮನೋಜ್ ಎಂಬಾತ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಇಬ್ಬರು ಕೂಡ ಕಾರಿನ ಮುಂದಿನ ಗಾಜಿಗೆ ಬಿದ್ದು ಪಕ್ಕದ ಕಚ್ಚಾ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸೀನಪ್ಪ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶ್ ಅವರ ಎಡಕಾಲು, ತಲೆ, ಎಡಗೈಗೆ ಗುದ್ದಿದ ಗಾಯವಾಗಿದ್ದು, ಕಕ್ಕಿಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಮೇಶ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top