ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಂಗಳೂರು: ರಸ್ತೆ ಬದಿಯ ಬೃಹತ್ ಮರ ಧರಾಶಾಹಿ; ದ್ವಿಚಕ್ರ ವಾಹನ ನಜ್ಜುಗುಜ್ಜು! – News Kadaba

ಮಂಗಳೂರು: ರಸ್ತೆ ಬದಿಯ ಬೃಹತ್ ಮರ ಧರಾಶಾಹಿ; ದ್ವಿಚಕ್ರ ವಾಹನ ನಜ್ಜುಗುಜ್ಜು!

(ನ್ಯೂಸ್‌ ಕಡಬ) newskadaba.com,ಜ.21 ಮಂಗಳೂರು: ನಗರದ ಪದವಿನಂಗಡಿ ಪ್ರದೇಶದ ಕೊರಗಜ್ಜ ಕಟ್ಟೆ ಮುಂಭಾಗದಲ್ಲಿ ಇಂದು ಆಕಸ್ಮಿಕವಾಗಿ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಈ ವೇಳೆ ಸ್ಥಳದಲ್ಲೇ ನಿಲ್ಲಿಸಿದ್ದ ಸ್ಕೂಟರ್ ಮೇಲೆ ಮರ ಬಿದ್ದ ಪರಿಣಾಮ ಸ್ಕೂಟರ್‌ಗೆ ಭಾರೀ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ.

ಸ್ಕೂಟರ್ ಮೇಲೆ ಮರ ಬಿದ್ದ ಪರಿಣಾಮ ಸ್ಕೂಟರ್‌ಗೆ ಭಾರೀ ಹಾನಿಯಾಗಿದೆ. ಅದೃಷ್ಟವಶಾತ್, ಸ್ಕೂಟರ್ ಬಳಿ ಯಾರೂ ಇರದ ಕಾರಣ ಪ್ರಾಣಾಪಾಯ ತಪ್ಪಿದೆ. ಅಲ್ಲದೆ, ಅದೇ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟೆಂಪೋ ಚಾಲಕ ಮರ ಬೀಳುವ ಕ್ಷಣದಲ್ಲಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮರ ಕುಸಿತದ ಪರಿಣಾಮವಾಗಿ ಸಮೀಪದ ಕಟ್ಟಡವೊಂದರ ಗಾಜುಗಳು ನುಚ್ಚುನೂರಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಘಟನೆ ನಡೆದ ತಕ್ಷಣ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಮರ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆದಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ತಿಳಿದುಬಂದಿದೆ.

Scroll to Top