ಪುತ್ತೂರು: ಕಾಳುಮೆಣಸು ಕೀಳುವಾಗ ತೆಂಗಿನ ಮರದಿಂದ ಬಿದ್ದು ನಿವೃತ್ತ ಮುಖ್ಯೋಪಾಧ್ಯಾಯ ಸಾವು

(ನ್ಯೂಸ್‌ ಕಡಬ) newskadaba.com,ಜ.20 ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಗುಮ್ಮಟ್ಟೆಗದ್ದೆಯಲ್ಲಿ ಸೋಮವಾರ, ಕಾಳುಮೆಣಸು ಕೀಳುವಾಗ ತೆಂಗಿನ ಮರದಿಂದ ಬಿದ್ದು ನಿವೃತ್ತ ಮುಖ್ಯೋಪಾಧ್ಯಾಯರು ಸಾವನ್ನಪ್ಪಿದ್ದಾರೆ.

ಮೃತರನ್ನು ಬೆಟ್ಟಂಪಾಡಿ ಗ್ರಾಮದ ಗುಮ್ಮಟ್ಟೆಗದ್ದೆ ನಿವಾಸಿ ನಾರಾಯಣ ನಾಯಕ್ ಪೈಂಟಿಮುಗೇರು ಎಂದು ಗುರುತಿಸಲಾಗಿದೆ. ಮನೆಯ ಮುಂದೆ ತೆಂಗಿನ ಮರದ ಮೇಲೆ ಬೆಳೆದಿದ್ದ ಕಾಳು ಮೆಣಸು ಕೀಳಲು ಅಲ್ಯೂಮಿನಿಯಂ ಏಣಿ ಹತ್ತುತ್ತಿದ್ದಾಗ ಜಾರಿ ಏಣಿಯೊಂದಿಗೆ ಬಿದ್ದಿದ್ದಾರೆ.

ಕೆಳಗೆ ಬಿದ್ದಾಗ ನಾರಾಯಣ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆ ಅವರು ಮೃತಪಟ್ಟರು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

 

 

Scroll to Top