ಬೆಂಗಳೂರಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ ಪ್ರಧಾನಿ ಮೋದಿಯು ಸುರೇಶ್ ಕುಮಾರ್ ಅವರ ಸಾಹಸಕ್ಕೆ ಮೆಚ್ಚುಗೆ

(ನ್ಯೂಸ್‌ ಕಡಬ) newskadaba.com,ಜ.02 ಬೆಂಗಳೂರು: 70ನೇ ವಯಸ್ಸಿನಲ್ಲೂ ಬೆಂಗಳೂರಿನಿಂದ ಸುಮಾರು 655 ಕಿ.ಮೀ. ದೂರದ ಕನ್ಯಾಕುಮಾರಿಗೆ ಸೈಕಲ್‌ ಯಾತ್ರೆ ನಡೆಸಿದ್ದ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್‌.ಸುರೇಶ್‌ಕುಮಾರ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಗುರುವಾರ(ಜ.01) ದೂರವಾಣಿ ಮೂಲಕ ಸುರೇಶ್‌ಕುಮಾರ್ ಅವರನ್ನು ಸಂಪರ್ಕಿಸಿರುವ ಪ್ರಧಾನಿ ಮೋದಿ ಅವರು ಸೈಕಲ್‌ ಯಾತ್ರೆಯ ಅನುಭವ ಪಡೆದುಕೊಂಡು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಖುದ್ದು ಸುರೇಶ್‌ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ಅತ್ಯಂತ ಸಂತಸದ ಸಂಗತಿ. ಪ್ರಧಾನಿ ಮೋದಿ ಅವರು ನನಗೆ ಖುದ್ದು ಫೋನ್ ಮಾಡಿ ನಾನು ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಮಾಡಿದ್ದಕ್ಕೆ ಅಭಿನಂದಿಸಿ ಸ್ಪೂರ್ತಿ ನೀಡಿದರು ಎಂದು ಹೇಳಿದ್ದಾರೆ.

51 ವರ್ಷಗಳ ಬಳಿಕ ಮತ್ತೊಮ್ಮೆ ವಿವೇಕಾನಂದ ಶಿಲಾ ಸ್ಮಾರಕ ಕ್ಕೆ ನನ್ನ ಸ್ನೇಹಿತರ ಜೊತೆ ಸೈಕಲ್ ಸವಾರಿ ಮಾಡಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 2025ರಲ್ಲಿ ನಮ್ಮ ತಂಡ 8,000 ಕಿ.ಮೀ. ದೂರದಷ್ಟು ಸೈಕ್ಲಿಂಗ್ ಮಾಡಿರುವ ಮಾಹಿತಿ ಪಡೆದು ಅಚ್ಚರಿ ಮತ್ತು ಸಂತಸ ಎರಡನ್ನೂ ವ್ಯಕ್ತಪಡಿಸಿದರು. ಅದರಲ್ಲೂ ತೀವ್ರ ಅನಾರೋಗ್ಯದ ನಂತರ ನಾನು ಈ ಕಾರ್ಯ ಕೈಗೊಂಡ ಬಗ್ಗೆ ಪ್ರಧಾನಿಗಳು ನನ್ನ ಬೆನ್ನು ತಟ್ಟಿದ್ದು ನನ್ನ ಸುಕೃತ ಎಂದು ತಿಳಿಸಿದ್ದಾರೆ.

Scroll to Top