(ನ್ಯೂಸ್ ಕಡಬ) newskadaba.com,ಡಿ.29: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ, ಏಳು ವರ್ಷಗಳ ದೀರ್ಘಕಾಲದ ಗೆಳತಿ ಅವಿವಾ ಬೇಗ್(Aviva Baig) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರೈಹಾನ್ ತನ್ನ ಗೆಳತಿ ಅವಿವಾ ಬೇಗ್ ಗೆ ಪ್ರಪೋಸ್ ಮಾಡಿದ್ದಾಗಿ ಹೇಳಲಾಗಿದ್ದು, ನಿಶ್ಚಿತಾರ್ಥಕ್ಕೆ ಎರಡೂ ಕುಟುಂಬಗಳ ಒಪ್ಪಿಗೆ ಸಿಕ್ಕಿದೆ ಎಂದು ವರದಿಯಾಗಿದೆ. ಅವಿವಾ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ನಿಶ್ಚಿತಾರ್ಥ















