ಕಡಬ: ಧಾರ್ಮಿಕ ಕ್ಷೇತ್ರದ ಹಿರಿಮೆಯ ಗರಿ ಇನ್ನಿಲ್ಲ ► ಪನ್ಯ ಶೇಕಬ್ಬ ಮುಸ್ಲಿಯಾರ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಹಿರಿಯ ಧಾರ್ಮಿಕ ಮುಖಂಡ ಕಡಬ ತಾಲೂಕಿನ ಪನ್ಯ ನಿವಾಸಿ ಅಹ್ಮದ್ ಮುಸ್ಲಿಯಾರ್ ಯಾನೆ ಶೇಖಬ್ಬ ಮುಸ್ಲಿಯಾರ್ (78) ಭಾನುವಾರ ಮುಂಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಾಡನ್ನೂರು, ಮರ್ಧಾಳ, ಪಡ್ಡಂತಡ್ಕ, ನೆಟ್ಟಣ, ಪರ್ತಿಪ್ಪಾಡಿ, ಆಲಂಪಾಡಿ, ಗುರುಪುರ ಮನಲ್, ಉಪ್ಪಿನಂಗಡಿಯ ಅಡೆಕ್ಕಲ್, ಕಡಮಕಲ್ ಎಸ್ಟೇಟ್ ಸೇರಿದಂತೆ ವಿವಿಧೆಡೆ ಐವತ್ತು ವರ್ಷಗಳಿಗೂ ಅಧಿಕ ಅವಧಿಯಲ್ಲಿ ದರ್ಸ್ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಇವರು ಕಳೆದೆರಡು ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು‌. ಭಾನುವಾರ ಬೆಳಗ್ಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದರು.

Also Read  ನೇತ್ರಾವತಿ ಸೇತುವೆಗೆ ಸಿಸಿಟಿವಿ ಅಳವಡಿಸುವಂತೆ ಮನವಿ ➤ ಶಾಸಕ ವೇದವ್ಯಾಸ ಕಾಮತ್

error: Content is protected !!
Scroll to Top