ಶಾಲಾ ವಾರ್ಷಿಕೋತ್ಸವ ಮತ್ತು ಶತಮಾನೋತ್ಸವದ ಉದ್ಘಾಟನೆ 2025-26

 (ನ್ಯೂಸ್‌ ಕಡಬ) newskadaba.com,ಡಿ.22  ಕಡಬ:ಸೈಂಟ್  ಜೋಕಿಮ್  ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ ಮತ್ತು ಶತಮಾನೋತ್ಸವದ ಉದ್ಘಾಟನೆಯು  ಪೂರ್ವಹ್ನ 10.30 ರಂದು ಸೈಂಟ್ ಜೋಕಿಮ್‌  ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆIಫಾಪ್ರಕಾಶ್ ಪಾವ್ಲ್ ಡಿಸೋಜ ಸಂಚಾಲಕರು, ಸೈಂಟ್ ಜೋಕಿಮ್ ವಿದ್ಯಾಸಂಸ್ಥೆ ಕಡಬ ವಹಿಸಿದ್ದು, ಕಾರ್ಯಕ್ರಮಕ್ಕೆ ಚಾಲನೆನೀಡಿದರು.

ಮುಖ್ಯ ಅತಿಥಿಗಳಾಗಿ ಶ್ರೀಸತೀಶ್ ನಾಯ್ಕ್  ಮಾಲಕರು ಭೂಮಿಕ ಕನ್ಸಲ್ಟೆಂಟ್ಸ್ ಕಡಬ ಹಾಗೂ ಶ್ರೀಸೈಮನ್‌ ಸಿ ಜೆ   ಕೌನ್ಸಿಲರ್ ಕಡಬ ಪಟ್ಟಣ ಪಂಚಾಯತ್ ವಹಿಸಿದ್ದು, ವಿದ್ಯಾರ್ಥಿಗಳನ್ನುಉದ್ದೇಶಿಸಿ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಸರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.  ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಸುಂದರ ಕಾರ್ಯಕ್ರಮದಲ್ಲಿ ಶ್ರೀಮತಿ ಜೆಸಿಂತ ವೇಗಸ್ ಕಾರ್ಯದರ್ಶಿಸೈಂಟ್ ಜೋಕಿಮ್ ಚರ್ಚ್ ಪಾಲನಾ ಮಂಡಳಿ , ಶ್ರೀಮಹಮ್ಮದ್ ಯೂನುಸ್  ಉಪಾಧ್ಯಕ್ಷರು ರಕ್ಷಕ ಶಿಕ್ಷಕ ಸಂಘ ಸೈಂಟ್ ಜೋಕಿಮ್ ಹಿ.ಪ್ರಾ.ಶಾಲೆ,  ಶ್ರೀಕಿರಣ ಕುಮಾರ್ ವಿ  ಪ್ರಾಶುಪಾಲರು ಸೈಂಟ್ ಜೋಕಿಮ್ ಪದವಿ  ಪೂರ್ವಕಾಲೇಜು,  ಶ್ರೀಮತಿಶ್ರೀ ಲತಾ,  ಮುಖ್ಯಗುರುಗಳು ಸೈಂಟ್ ಜೋಕಿಮ್ ಪ್ರೌಢಶಾಲೆ, ಶ್ರೀಮತಿ ದಕ್ಷ ಕುಮಾರಿ ಜಿ ಮುಖ್ಯಗುರುಗಳು ಸೈಂಟ್ ಆನ್ಸ್ ಆ.ಮಾ.ಪ್ರಾಥಮಿಕ ಶಾಲೆ, ಹಾಗೂ ಬೋಧಕ ಹಾಗೂ ಬೋಧಕೇತರ ವೃಂದ, ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಈ  ಸಂದರ್ಭದಲ್ಲಿ ಮಕ್ಕಳಿಗೆ ಸಿಹಿತಿಂಡಿ ನೀಡಲಾಯಿತು

Scroll to Top