ಮಂಗಳೂರು: ಶಿಕ್ಷಣಕ್ಕೆ ಹೆಸರಾಗಿರುವ ಮಂಗಳೂರು, ಇನ್ನೊಂದು ಮಗ್ಗುಲಲ್ಲಿ ಡ್ರಗ್ಸ್‌ ಮಾರುಕಟ್ಟೆಯಾಗಿಯೂ ಕುಖ್ಯಾತಿ ಗಳಿಸಿದೆ!…

(ನ್ಯೂಸ್‌ ಕಡಬ) newskadaba.com,  ಡಿ.15 : ರಾಜ್ಯದಲ್ಲಿ ಬೆಂಗಳೂರಿನಿಂದಾಚೆಗೆ ಮಾದಕ ದ್ರವ್ಯದ ಮಾರಕ ಜಾಲ ದೊಡ್ಡಮಟ್ಟದಲ್ಲಿ ವಿಸ್ತರಿಸಿರುವುದು ಮಂಗಳೂರಿನಲ್ಲಿ. ಶಿಕ್ಷಣಕ್ಕೆ ಹೆಸರಾಗಿರುವ ಮಂಗಳೂರು, ಇನ್ನೊಂದು ಮಗ್ಗುಲಲ್ಲಿ ಡ್ರಗ್ಸ್‌ ಮಾರುಕಟ್ಟೆಯಾಗಿಯೂ ಕುಖ್ಯಾತಿ ಗಳಿಸಿದೆ!. ಆದರೆ, ಕಳೆದ ಕೆಲವು ತಿಂಗಳುಗಳಿಂದ ಜಿಲ್ಲೆಯ ಇಡೀ ಪೊಲೀಸ್‌ ಇಲಾಖೆ ಡ್ರಗ್ಸ್‌ ವಿರುದ್ಧ ಆಖಾಡಕ್ಕಿಳಿದು ನೇರ ಸಮರಕ್ಕೆ ಧುಮುಕಿದ್ದು, ಡ್ರಗ್ಸ್‌ ಪೆಡ್ಲರ್‌ಗಳಲ್ಲಿ ನಡುಕ ಹುಟ್ಟಿಸಿದೆ.

ಈ ಕಾರಣದಿಂದ ದೊಡ್ಡಮಟ್ಟದ ಧನಾತ್ಮಕ ಬದಲಾವಣೆ ಜಿಲ್ಲೆಯಲ್ಲಿ ಕಂಡು ಬಂದಿದೆ.ಆದರೆ, ಕಳೆದೊಂದು ದಶಕದಿಂದ ವಿಸ್ತಾರವಾಗಿ ಚಾಚಿಕೊಂಡಿರುವ ಮಾದಕ ದ್ರವ್ಯದ ಕಂಬಂಧ ಬಾಹುಗಳ ದಮನವೇ ಬಹುದೊಡ್ಡ ಸವಾಲಾಗಿದೆ.

‘ಎಜ್ಯುಕೇಶನ್‌ ಹಬ್‌’ ಎನಿಸಿಕೊಂಡಿರುವ ಮಂಗಳೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರು ಸೇರಿದಂತೆ ಯುವ ಸಮೂಹ ಡ್ರಗ್ಸ್‌ ಮಾರುಕಟ್ಟೆಯ ಮುಖ್ಯ ಟಾರ್ಗೆಟ್‌. ನೆಲ, ಜಲ, ವಾಯು ಸಂಪರ್ಕ ಎಲ್ಲವನ್ನೂ ಜಿಲ್ಲೆ ಹೊಂದಿರುವುದರಿಂದ ಡ್ರಗ್ಸ್‌ ಕಾಳದಂಧೆಗೆ ಅನುಕೂಲಕರವಾಗಿ ಪರಿಣಮಿಸಿದೆ.

 

 

Scroll to Top