(ನ್ಯೂಸ್ ಕಡಬ) newskadaba.com, ಡಿ.01: ಸಂಸತ್‌ನ ಚಳಿಗಾಲದ ಅಧಿವೇಶನ ಇಂದು (ಡಿಸೆಂಬರ್ 1) ಆರಂಭಗೊಳ್ಳಲಿದ್ದು, ಡಿಸೆಂಬರ್ 19ರಂದು ಸಂಪನ್ನಗೊಳ್ಳಲಿದೆ. 19 ದಿನಗಳ ಅವಧಿಯಲ್ಲಿ ಒಟ್ಟು 15 ಕಲಾಪಗಳು ನಡೆಯಲಿದ್ದು, ಕೇಂದ್ರ ಮತ್ತು ವಿಪಕ್ಷಗಳ ನಡುವಿನ ರಾಜಕೀಯ ತೀವ್ರತೆ ಈ ಬಾರಿಯ ಅಧಿವೇಶನಕ್ಕೆ ವಿಶೇಷ ಬಣ್ಣ ನೀಡಲಿದೆ.
ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿವೆ. ಜೊತೆಗೆ ಚುನಾವಣಾ ಆಯೋಗ ನಡೆಸುತ್ತಿರುವ ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ರಾಜಕೀಯ ಹಸ್ತಕ್ಷೇಪ ಮತ್ತು ಅಕ್ರಮಗಳನ್ನು ಎತ್ತಿತೋರಿಸಲು ಸಜ್ಜಾಗಿವೆ. ವಿಪಕ್ಷಗಳು SIR ಪ್ರಕ್ರಿಯೆಯಲ್ಲಿ ಅಕ್ರಮ, ಅನ್ಯಾಯ ಹಾಗೂ ಕೇಂದ್ರ ಸರ್ಕಾರದ ಪ್ರಭಾವವಿದೆ ಎಂದು ವಾದಿಸುತ್ತಿದ್ದು, ಈ ವಿಚಾರವನ್ನು ಸಂಸತ್‌ನಲ್ಲಿ ಜೋರಾಗಿ ಪ್ರಸ್ತಾಪಿಸುವ ಯೋಜನೆ ಮಾಡಿಕೊಂಡಿವೆ.












