ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ೧೬ ಜೋಡಿಗೆ ‘ಮಾಂಗಲ್ಯಭಾಗ್ಯ



(ನ್ಯೂಸ್ ಕಡಬ) newskadaba.com, ಡಿ.01: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಜಂಟಿ ಆಯೋಜನೆಯಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಭಾನುವಾರ ಮೊತ್ತಮೊದಲ ಬಾರಿಗೆ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ೧೬ ಜೋಡಿಗಳು ಸತಿಪತಿಗಳಾದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮಶತಾಬ್ಧಿ ಹಿನ್ನಲೆಯಲ್ಲಿ ೩ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಜತೆಗೆ ಈ ಉಚಿತ ಸಾಮೂಹಿಕ ವಿವಾಹ ವ್ಯವಸ್ಥೆ ಮಾಡಲಾಗಿತ್ತು. ವೈದಿಕ ರೀತಿಯಲ್ಲಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಪುರೋಹಿತರುಗಳು ಧಾರ್ಮಿಕ ವಿಧಿವಿದಾನಗಳನ್ನು ನೆರವೇರಿಸಿದರು.
ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಟ್ರಸ್ಟ್ ಕಚೇರಿಯಿಂದ ಬೆಳಿಗ್ಗೆ ವಧೂವರರ ದಿಬ್ಬಣ ಕಲ್ಯಾಣೋತ್ಸವ ಮಂಟಪಕ್ಕೆ ಬಂದು ಅಲ್ಲಿ ಮಹಾಲಿಂಗೇಶ್ವರ ದೇವರ ದರ್ಶನ ಪಡೆದ ಬಳಿಕ ಈ ವಧೂವರರು ಶ್ರೀನಿವಾಸ, ಶ್ರೀದೇವಿ ಹಾಗೂ ಭೂದೇವಿಯರಿಗೆ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನ ಮಂಟಪದಲ್ಲಿ ವೈದಿಕ ವಿದ್ವಾಂಸ ಶ್ರೀಕೃಷ್ಣ ಉಪಾಧ್ಯಾಯ ಅವರು ವಿವಾಹದ ಪ್ರತೀ ಹೆಜ್ಜೆಗಳನ್ನು ವಿವರಿಸಿದಂತೆ ಪ್ರಧಾನ ಮಂಟಪದ ಎಡ-ಬಲ ಬದಿಗಳಲ್ಲಿನ ಪ್ರತ್ಯೇಕ ವಿವಾಹ ವೇದಿಕೆಗಳಲ್ಲಿ ವಿವಾಹ ಪೂರ್ವ ವಿಧಿಗಳನ್ನು ನಡೆಸಲಾಯಿತು. ಪ್ರತೀ ಜೋಡಿಗೂ ಓರ್ವ ಪುರೋಹಿತರನ್ನು ನಿಯೋಜನೆ ಮಾಡಲಾಗಿತ್ತು.
ಶ್ರೀಕೃಷ್ಣ ಉಪಾಧ್ಯಾಯರ ನೀಡುತ್ತಿದ್ದ ನಿರ್ದೇಶನದಂತೆ ಪ್ರತೀ ಪುರೋಹಿತರು ವಧೂವರರಿಗೆ ಧಾರಾಮುಹೂರ್ತ, ಮಾಲಾಧಾರಣೆ, ಮಾಂಗಲ್ಯ ಧಾರಣೆ, ಕಂಕಣ ಕಟ್ಟುವಿಕೆ ಮತ್ತಿತರರ ಕ್ರಿಯೆಗಳನ್ನು ನಡೆಸಲಾಯಿತು. ಯಜ್ಞಮಂಟಪಕ್ಕೆ ಬಂದ ಪ್ರತೀ ಜೋಡಿಯೂ ಅಗ್ನಿದೇವನಿಗೆ ಯಾಜ ಅರ್ಪಣೆ ಮಾಡಲಾಯಿತು. ಬಳಿಕ ಸಪ್ತಪದಿಯನ್ನೂ ನಡೆಸಲಾಯಿತು. ಆಮೇಲೆ ದೇವಳಕ್ಕೆ ಬಂದು ಮಹಾಲಿಂಗೇಶ್ವರ ದೇವರ ದರ್ಶನ ಪಡೆದರು. ವಿವಾಹವೇದಿಕೆಯಲ್ಲಿ ವಿವಾಹ ಆರತಕ್ಷತೆಗೂ ಬಂಧುಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಸಾಮೂಹಿಕ ವಿವಾಹದ ಹಿನ್ನಲೆಯಲ್ಲಿ ಸಿಹಿಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಶ್ರೀನಿವಾಸ ಕಲ್ಯಾಣೋತ್ಸವ ಹಿನ್ನಲೆಯಲ್ಲಿ ಶ್ರೀನಿವಾಸಗೆ ನಡೆದ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಞ ಶ್ರೀರಾಮ ಭಟ್ ಪಾತಾಳ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನರಸಿಂಹ ಪ್ರಸಾದ್, ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಉಮೇಶ್ ಕೋಡಿಬೈಲು ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಾಂಪತ್ಯ ಬದುಕಿಗೆ ಕಾಲಿಟ್ಟ ವಧೂವರರು..
೧.ಮಂಜುನಾಥ ತಿಂಗಳಾಡಿ, ಪುತ್ತೂರು- ಸೌಜನ್ಯ ಲಾಯಿಲ, ಬೆಳ್ತಂಗಡಿ, ೨. ಬಾಳಪ್ಪ ತಾರಿಗುಡ್ಡೆ, ಪುತ್ತೂರು- ಸೀತಾಲಕ್ಷ್ಮೀ ಚಿಕ್ಕಮುಡ್ನೂರು ಪುತ್ತೂರು, ೩. ರಾಜೇಶ್ ಬಿ., ಬೆಳ್ಳೂರು, ಕಾಸರಗೋಡು- ಸತ್ಯವತಿ, ಕೊರ್ತ್ತಿಕುಂಡ್, ಕಾಸರಗೋಡು, ೪. ಲಕ್ಷ್ಮಣ, ಕೊಳ್ತಿಗೆ, ಪುತ್ತೂರು- ಶೀಲಾವತಿ, ಕಡೇಶ್ವಾಲ್ಯ, ಬಂಟ್ವಾಳ, ೫. ಉಮೇಶ್ ಕೆ., ಎಣ್ಮೂರು, ಕಡಬ- ಸವಿತಾ ಬಿ., ಕಾಣಿಯೂರು, ಕಡಬ, ೬. ಯೋಜಿತ್, ನೇರೋಳ್ತಡ್ಕ, ಕಡಬ – ಸುಪ್ರಿಯಾ, ಕಾಪುತ್ತಡ್ಕ, ಮಾಡಾವು, ಪುತ್ತೂರು, ೭. ಶ್ರೀಶೈಲ, ತೆಂಕಿಲ, ಪುತ್ತೂರು- ಹರ್ಷಿಣಿ ಕೆ.ಕೆ., ಕಾಮಣ, ಕಡಬ., ೮. ರಂಜಿತ್, ಬೆಳ್ವೆ, ಹೆಬ್ರಿ- ತನುಷಾ ಸಿ., ಚೆಲ್ಯಡ್ಕ, ಬೆಟ್ಟಂಪಾಡಿ, ಪುತ್ತೂರು, ೯. ನಾರಾಯಣ, ಪುಣಚ, ಬಂಟ್ವಾಳ- ಸುಂದರಿ, ವಾಣಿನಗರ, ಪಡ್ರೆ, ಕಾಸರಗೋಡು, ೧೦. ಲೋಕೇಶ್ ಬದಿಯಡ್ಕ, ಮುಂಡೂರು ಪುತ್ತೂರು- ಪ್ರೇಮಾ, ಕಿನ್ನಿಂಗಾರು, ಕಾಸರಗೋಡು, ೧೧. ಯತೀಶ್ ಕೆಮ್ಮಾರ, ಪೆರ್ಲಂಪಾಡಿ ಪುತ್ತೂರು- ಹೇಮಾಶ್ರೀ, ಕಡೇಶ್ವಾಲ್ಯ, ಬಂಟ್ವಾಳ, ೧೨. ನಾಗೇಂದ್ರ ಕಾಪುತಡ್ಕ, ಮಾಡಾವು, ಪುತ್ತೂರು- ರಮ್ಯಶ್ರೀ ಕಲ್ಲುಗುಡ್ಡೆ, ಸರ್ವೆ, ಪುತ್ತೂರು, ೧೩. ಪ್ರವೀಣ್, ಮರ್ಕಂಜ, ಸುಳ್ಯ- ಸುಮಿತ್ರ ಮಾಡಾವು, ಪುತ್ತೂರು, ೧೪. ಧರ್ಮಶ್, ಬೀಡು, ಬೆಳ್ಳಾರೆ, ಸುಳ್ಯ- ಕವಿತಾ, ಬೆಳ್ಳಾರೆ, ಸುಳ್ಯ, ೧೫. ಸುಂದರ ವರ್ಕಾಡಿ, ಮಂಜೇಶ್ವರ- ಕಲ್ಯಾಣಿ ಮೀಯಪದವು, ಮಂಜೇಶ್ವರ, ೧೬. ವರ್ಷದ್ ಅಲೆವೂರು, ಉಡುಪಿ- ದೀಪಶ್ರೀ ಅಂಕಜಾಲು, ಕಾಮಣ, ಕಡಬ ಈ ೧೬ ಜೋಡಿಗಳು ಶ್ರೀನಿವಾಸ ಕಲ್ಯಾಣೋತ್ಸವದ ಮಂಟಪದಲ್ಲಿ ಸತಿಪತಿಗಳಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟರು.





error: Content is protected !!
Scroll to Top