ಸೈಕ್ಲೋನ್ ದಿತ್ವಾ ಪ್ರಭಾವ- ಇಂದು ಹಲವು ಜಿಲ್ಲೆಗಳಲ್ಲಿ ಮಳೆ



(ನ್ಯೂಸ್ ಕಡಬ) newskadaba.com, ಡಿ.01: ದಿತ್ವಾ ಚಂಡಮಾರುತದ ಪ್ರಭಾವದಿಂದ ಬೆಂಗಳೂರು ನಗರದಲ್ಲಿ ವಿಪರೀತ ಅನಿಸುವಷ್ಟು ಚಳಿಯ ಅನುಭವ ಆಗುತ್ತಿದೆ. ನಿನ್ನೆ (ಭಾನುವಾರ) ದಾಖಲೆ ಚಳಿ ಕಂಡುಬಂತು. ಮುಂಜಾನೆ, ಸಂಜೆ ಅಲ್ಲದೇ ದಿನವಿಡಿಯೂ ಕಳೆದೆರಡು ದಿನದಿಂದ ಮೋಡ ತುಂಬಿದ್ದು, ಇವತ್ತೂ ಕೂಡಾ ಇದೇ ವಾತಾವರಣ ಕಂಡುಬಂದಿದೆ. ಮೈಕೊರೆವ ಚಳಿಯೊಂದಿಗೆ ತುಂತುರು ಮಳೆ ಕೂಡ ಅಲ್ಲಲ್ಲಿ ಬೀಳುತ್ತಿದೆ. ಈ ನಡುವೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.





ದಿತ್ವಾ ಚಂಡಮಾರುತದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಹಗುರ ಮಳೆಯಾಗುವ ಮುನ್ಸೂಚನೆ ನೀಡಿದೆ. ಜೊತೆಗೆ ಹಗಲಿನಲ್ಲಿ ಗರಿಷ್ಠ ಉಷ್ಣಾಂಶ ಗಣನೀಯವಾಗಿ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ದಕ್ಷಿಣ ಒಳನಾಡು ಕರಾವಳಿ ಜಿಲ್ಲೆಗಳಿಗೆ ಹಗುರ ಮಳೆಯ ಮುನ್ಸೂಚನೆ ನೀಡಿದ್ದರೆ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿಯ ಕೆಲವೆಡೆ ಸಾಧಾರಣ ಮಲೆಯಾಗಲಿದೆ ಎಂದು ತಿಳಿಸಿದೆ.






error: Content is protected !!
Scroll to Top