ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಉಡುಪಿ : ಸ್ವರ್ಣಕವಚದ ಕನಕನಕಿಂಡಿಯಿಂದ ಪೊಡವಿಗೊಡೆಯನ ಕಣ್ತುಂಬಿಕೊಂಡ ಪ್ರಧಾನಿ ಮೋದಿ – News Kadaba

ಉಡುಪಿ : ಸ್ವರ್ಣಕವಚದ ಕನಕನಕಿಂಡಿಯಿಂದ ಪೊಡವಿಗೊಡೆಯನ ಕಣ್ತುಂಬಿಕೊಂಡ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com,  ನ.28: ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಪ್ರಸಿದ್ಧ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ. ಪ್ರಧಾನಿಯವರು ಮಠದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿಶೇಷವಾಗಿ ಸ್ವರ್ಣ ಲೇಪಿತ ಮಂಟಪದ ಉದ್ಘಾಟನೆ ಕೂಡ ನೆರವೇರಿಸಿದರು.

ಉದ್ಘಾಟನೆಯ ಸಂದರ್ಭದಲ್ಲಿ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಮೋದಿಯವರು ನಂತರ ಮುಖ್ಯಪ್ರಾಣ ದೇವರ ಗರುಡ ದರ್ಶನ ಮತ್ತು ಮಠದ ವಿವಿಧ ಗುಡಿಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಠದ ಪರಿಸರದಲ್ಲಿ ವೈದಿಕರು ಉಪನಿಷತ್ತು, ವೇದ ಪಠಣ ಮತ್ತು ಭಗವದ್ಗೀತೆ ಪಾಠ ನಡೆಸಿದರು. ದೇವರ ಮುಂದೆ ಪ್ರಧಾನಿ ಮೋದಿ ಅವರಿಗೆ ಪ್ರಸಾದ ವಿತರಿಸಲಾಯಿತು. ಪುತ್ತಿಗೆ ಸ್ವಾಮೀಜಿಗಳು, ಶಿರೂರು ವೇದವರ್ಧನ ತೀರ್ಥ, ಪೇಜಾವರ ವಿಶ್ವಪ್ರಸನ್ನ ತೀರ್ಥ, ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸೇರಿದಂತೆ ಹಲವು ಹಿರಿಯ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಠದ ನಂತರ ಮೋದಿ ಗೀತಾ ಮಂದಿರಕ್ಕೆ ಭೇಟಿ ನೀಡಿ, ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ ಮಾಡಿದರು. ಧ್ಯಾನ ಮಂದಿರದ ಗೋಡೆಯ ಮೇಲೆ ಭಗವದ್ಗೀತೆ ಶಿಲ್ಪ ಬರಹವನ್ನು ವೀಕ್ಷಿಸಿದರು. ಬಳಿಕ ಲಕ್ಷಕಂಠ ಭಗವದ್ಗೀತೆ ಸಮಾವೇಶದಲ್ಲಿ ಪಾಲ್ಗೊಂಡ ಮೋದಿ, ಸಾವಿರಾರು ಭಕ್ತರೊಂದಿಗೆ ವೇದಿಕೆಯ ಕೆಳಭಾಗದಲ್ಲಿ ಸ್ತೋತ್ರ ಪಠಣದಲ್ಲಿ ಭಾಗವಹಿಸಿದರು.

Scroll to Top