ಕಡಬ ತಮಿಳು ಸೇವಾ ಸಂಘದಿಂದ ನೀರು, ಹಣ್ಣು ಹಂಚಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.26. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠೀ ಪ್ರಯುಕ್ತ ಕಡಬದ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ಪಾದಯಾತ್ರಿಗಳಿಗೆ ಕಡಬ ತಮಿಳು ಸೇವಾ ಸಂಘದ ವತಿಯಿಂದ ನೀರು, ಹಣ್ಣು ಮತ್ತು ಬಿಸ್ಕತ್ತುಗಳನ್ನು ಹಂಚಲಾಯಿತು.

ಕಡಬ ತಮಿಳು ಸೇವಾ ಸಂಘದ ವತಿಯಿಂದ ಪ್ರಚಾರ ಮತ್ತು ಸೇವಾ ಉದ್ದೇಶದಿಂದ ದಾನಿಗಳ ಸಹಕಾರದಿಂದ ಸುಮಾರು 200 ಮಂದಿ ಯಾತ್ರಾರ್ಥಿಗಳಿಗೆ ನೀರು, ಹಣ್ಣು ಮತ್ತು ಬಿಸ್ಕತ್ತುಗಳನ್ನು ನೀಡಲಾಯಿತು.

Scroll to Top