ತಿರುಪತಿ ಡಿಸೆಂಬರ್ 30 ರಿಂದ ಜನವರಿ 8 ರವರೆಗೆ ವೈಕುಂಠ ದರ್ಶನ: ವಿಶೇಷ ಸವಲತ್ತು ರದ್ದು, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ



(ನ್ಯೂಸ್‌ ಕಡಬ) newskadaba.com,  ನ.26 ತಿರುಪತಿ: ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ತಿರುಮಲ ತಿರುಪತಿ ದೇವಸ್ಥಾನಗಳು 10 ದಿನಗಳ ತಿರುಪತಿ ವೈಕುಂಠ ದರ್ಶನವನ್ನು ಘೋಷಣೆ ಮಾಡಿದೆ. ಇದಕ್ಕಾಗಿ ಟಿಟಿಡಿ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಿದ್ದು, ಹೆಚ್ಚಿನ ಬೇಡಿಕೆಯಿರುವ ಮೊದಲ ಮೂರು ದಿನಗಳವರೆಗೆ ಎಲೆಕ್ಟ್ರಾನಿಕ್ ಡಿಪ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಡಿಸೆಂಬರ್ 30 ರಿಂದ ಜನವರಿ 8ರವರೆಗೆ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿರುವ ವಿಸ್ತೃತ ವ್ಯವಸ್ಥೆಗಳ ಮತ್ತು ಮಾರ್ಗಸೂಚಿಗಳನ್ನು ಟಿಟಿಡಿ ಪ್ರಕಟಿಸಿದೆ.





ಡಿಸೆಂಬರ್ 30 ರಿಂದ ಜನವರಿ 8 ರವರೆಗೆ ತಿರುಪತಿ ಶ್ರೀವಾರಿ ದೇವಾಲಯದಲ್ಲಿ ದೇವರ ದರ್ಶನಕ್ಕೆ ಟಿಟಿಡಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಇದಕ್ಕಾಗಿ ಹೆಚ್ಚಿನ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಿದ್ದು, ವೈಕುಂಠ ದರ್ಶನ ಪ್ರಾರಂಭದ ಮೊದಲ ಮೂರು ದಿನಗಳವರೆಗೆ ಎಲೆಕ್ಟ್ರಾನಿಕ್ ಡಿಪ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.






ಡಿಸೆಂಬರ್ 30 ರಂದು ವೈಕುಂಠ ಏಕಾದಶಿ, ಡಿಸೆಂಬರ್ 31 ವೈಕುಂಠ ದ್ವಾದಶಿ ಮತ್ತು ಜನವರಿ 1 ಹೊಸ ವರ್ಷದ ಪ್ರಯುಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಡಿಪ್ ವ್ಯವಸ್ಥೆಯ ಮೂಲಕ ದರ್ಶನ ಟೋಕನ್‌ಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.

error: Content is protected !!
Scroll to Top