(ನ್ಯೂಸ್ ಕಡಬ) newskadaba.com, ನ.22: ಮುಂಬೈಯಲ್ಲಿ ಕಲ್ಮಾಡಿಯ ಯುವಕನೊಬ್ಬ ಶುಕ್ರವಾರ ತಡರಾತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಉಡುಪಿಯ ಕಲ್ಮಾಡಿಯ ಮೂಲದ ಇನಿಶ್ ಲಸ್ರಾದೊ ಎಂದು ಗುರುತಿಸಲಾಗಿದೆ. ಅವರು ಮೋಟಾರ್ ಸೈಕಲ್ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇನಿಶ್ ಕಳೆದ 3 ವರ್ಷಗಳಿಂದ ಥಾಣೆಯಲ್ಲಿರುವ ಬಹುರಾಷ್ಟೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಲ್ಮಾಡಿ ಚರ್ಚ್ ನ ಐಸಿವೈಎಂ ಘಟಕದಲ್ಲಿ ಮತ್ತು ವಿವಿಧ ಚರ್ಚ್ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದರು.














