ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪಿಎಫ್ ಸದಸ್ಯರಿಗೆ ಹೊಸ ವರ್ಷದ ಉಡುಗೊರೆ: ವೇತನ ಮಿತಿಯಲ್ಲಿ ಭಾರೀ ಹೆಚ್ಚಳ! – News Kadaba

ಪಿಎಫ್ ಸದಸ್ಯರಿಗೆ ಹೊಸ ವರ್ಷದ ಉಡುಗೊರೆ: ವೇತನ ಮಿತಿಯಲ್ಲಿ ಭಾರೀ ಹೆಚ್ಚಳ!

(ನ್ಯೂಸ್‌ ಕಡಬ) newskadaba.com,  ನ.21  :” ನೌಕರರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ ಸದಸ್ಯರಿಗೆ ಪ್ರಮುಖ ಸುಧಾರಣೆಗೆ ಸಿದ್ಧತೆ ನಡೆಸುತ್ತಿದೆ. ಭವಿಷ್ಯ ನಿಧಿ ಮತ್ತು ಅದರ ಪಿಂಚಣಿ ಯೋಜನೆಗೆ ಕಡ್ಡಾಯ ಕೊಡುಗೆಗಾಗಿ ವೇತನ ಮಿತಿ ಹೆಚ್ಚಿಸಲು ಇಪಿಎಫ್‌ಒ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಇಪಿಎಫ್‌ಒನ ಪ್ರಸ್ತುತ ವೇತನ ಮಿತಿ ತಿಂಗಳಿಗೆ 15,000 ರೂ. ಇದೆ.

ಇಪಿಎಫ್ ಮಿತಿಯನ್ನ ಕೊನೆಯದಾಗಿ 2014ರಲ್ಲಿ ಪರಿಷ್ಕರಿಸಲಾಯಿತು, ಆಗ ಅದನ್ನ ತಿಂಗಳಿಗೆ 6,500 ರೂ.ಗಳಿಂದ 15,000 ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈ ಬದಲಾವಣೆ ಸೆಪ್ಟೆಂಬರ್ 1, 2014ರಿಂದ ಜಾರಿಗೆ ಬಂದಿತ್ತು. ನೌಕರರ ಭವಿಷ್ಯ ನಿಧಿ (EPF) ಮತ್ತು ನೌಕರರ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಯಾರು ಕಡ್ಡಾಯವಾಗಿ ಒಳಗೊಳ್ಳಲ್ಪಡುತ್ತಾರೆ ಎಂಬುದನ್ನ ಮಿತಿ ನಿರ್ಧರಿಸುವುದರಿಂದ ಇದು ಮಹತ್ವದ್ದಾಗಿದೆ. ಒಟ್ಟಾರೆ ನಿವೃತ್ತಿ ಭದ್ರತೆ ಬಲಪಡಿಸುವ ಮತ್ತು ಲಕ್ಷಾಂತರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ವಿಸ್ತರಿಸುವ ಪ್ರಯತ್ನಗಳ ಭಾಗವಾಗಿ ಈ ಕ್ರಮವನ್ನ ನೋಡಲಾಗಿದೆ.

ಅಸ್ತಿತ್ವದಲ್ಲಿರುವ ನಿಯಮದ ಪ್ರಕಾರ,15,000 ರೂ.ಕ್ಕಿಂತ ಹೆಚ್ಚು ಆದಾಯ ಗಳಿಸುವ ಉದ್ಯೋಗಿಗಳು ಕಡ್ಡಾಯವಾಗಿ ಇಪಿಎಫ್ ವ್ಯಾಪ್ತಿಗೆ ಬರುವುದಿಲ್ಲ. ಪರಿಣಾಮ ಮಿತಿಗಿಂತ ಸ್ವಲ್ಪ ಹೆಚ್ಚು ಆದಾಯ ಗಳಿಸುವ ಅನೇಕ ಖಾಸಗಿ ವಲಯದ ಉದ್ಯೋಗಿಗಳು ಇನ್ನೂ ಯಾವುದೇ ಔಪಚಾರಿಕ ಪಿಂಚಣಿ ಯೋಜನೆಯ ಭಾಗವಾಗಿಲ್ಲ. ಇದು ಈ ಉದ್ಯೋಗಿಗಳನ್ನ ವೃದ್ಧಾಪ್ಯದಲ್ಲಿ ತಮ್ಮ ಮಕ್ಕಳ ಮೇಲೆ ಅವಲಂಬಿತರನ್ನಾಗಿ ಮಾಡುತ್ತದೆ. ತಿಂಗಳಿಗೆ 15,000 ರೂ.ವರೆಗೆ ಮೂಲ ವೇತನ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಇಪಿಎಫ್ ಸದಸ್ಯತ್ವ ಕಡ್ಡಾಯ.

Scroll to Top