ಸಂಚಾರ ದಂಡ ಪಾವತಿಗೆ ಶೇ.50 ರಿಯಾಯ್ತಿ: ಇಂದಿನಿಂದ ಮತ್ತೆ ಜಾರಿ, 20 ದಿನ ಅವಕಾಶ

(ನ್ಯೂಸ್‌ ಕಡಬ) newskadaba.com,  ನ.21 ಬೆಂಗಳೂರು: ಮೂರು ದಶಕಗಳ ಹಳೇ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣ ಸಂಬಂಧ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಈ ರಿಯಾಯಿತಿ ಶುಕ್ರವಾರದಿಂದಲೇ ಜಾರಿಗೆ ಬರಲಿದ್ದು, ದಂಡ ಪಾವತಿಗೆ 20 ದಿನಗಳ ಸಮಯ ನೀಡಲಾಗಿದೆ. ಈ ಆಫರ್‌ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸಂಚಾರ ಪೊಲೀಸ್ ಠಾಣೆಗಳು, ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ ಸೈಟ್‌ (ಕೆಎಸ್‌ಪಿ) ಹಾಗೂ ಬೆಂಗಳೂರು ಒನ್ ಸೇರಿ ಆನ್‌ಲೈನ್ ಮೂಲಕ ಕೂಡ ದಂಡ ಪಾವತಿಗೆ ಅವಕಾಶ ಕೊಡಲಾಗಿದೆ.

1991-92 ರಿಂದ 2019-20 ರ ಅವಧಿಯಲ್ಲಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಕುರಿತು ದಂಡದ ಪಾವತಿಗೆ ಶೇ.50 ರಷ್ಟು ರಿಯಾಯಿತಿ ನ.21 ರಿಂದ ಡಿ.12 ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಯ (ಸಾರಿಗೆ ಇಲಾಖೆ) ರಂಗಪ್ಪ ಕರಿಗಾರ ಆದೇಶದಲ್ಲಿ ಹೇಳಿದ್ದಾರೆ.

Scroll to Top