ಬೆಳ್ಳಾರೆ: ಕೆಪಿಎಸ್ ಶಾಲೆಯಲ್ಲಿ ನೂತನ ಕೊಠಡಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

(ನ್ಯೂಸ್‌ ಕಡಬ) newskadaba.com,  ನ.19  ಸುಳ್ಯ: ಬೆಳ್ಳಾರೆ ಕೆ.ಪಿ.ಎಸ್ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ನೂತನ ಕೊಠಡಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.

ಸಿ.ಆರ್.ಎಸ್ ಅನುದಾನದಡಿ ೬೩ ಲಕ್ಷದ ರೂ ವೆಚ್ಚದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕೊಠಡಿಗಳು ನಿರ್ಮಾಣ ಆಗಲಿದೆ. ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಗ್ರಾಮ ಪಂಚಾಯತಿ ಅಧ್ಯಕ್ಷೆ ನಮಿತ ರೈ, ಎಸ್.ಡಿ.ಎಂ.ಸಿ ಅಧ್ಯಕ್ಷ ಹರ್ಷ ಭಟ್, ಮಾಜಿ ಜಿಲ್ಲಾ ಪಂಚಾಯಿ ಸದಸ್ಯೆ ರಾಜೀವಿ ರೈ, ಕಾಲೇಜು ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಪೋಷಕರು, ಹಾಗೂ ಊರವರು ಉಪಸ್ಥಿತರಿದ್ದರು.

Scroll to Top