ಮರ್ಧಾಳ ಅಲ್ ಹಿದಾಯ ಇಂಟರ್ನ್ಯಾಷನಲ್ ಪ್ರವಾಸಿ ಸಂಘಟನೆ ಗೆ ಸರಕಾರದ ರಿಜಿಸ್ಟರ್ ಮಾನ್ಯತೆ



(ನ್ಯೂಸ್ಕಡಬ) newskadaba.com,  ನ.08 ಕಡಬ:- ಮರ್ಧಾಳ ಆಸುಪಾಸಿನ ಗ್ರಾಮಗಳ ನಿವಾಸಿಗಳಾಗಿ ಉದ್ಯೋಗ ನಿಮಿತ್ತ ಹಲವು ಗಲ್ಫ್ ರಾಷ್ಟ್ರೀಗಳು,ಮತ್ತು ಇಂಗ್ಲೆಂಡ್ ಗಳಲ್ಲಿ ಅನಿವಾಸಿ ಭಾರತೀಯರಾಗಿದ್ದು ಕೊಂಡು ತಮ್ಮ ಊರಿನ ಸರ್ವ ತೋಮುಖ  ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರವಾಸಿಗರ ಸಂಘಟನೆ ಅಲ್ ಹಿದಾಯ ಇಂಟರ್ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ ಮರ್ಧಾಳ(ರಿ). ಕೆಲವು ವರ್ಷ ನುಸ್ರತುಲ್ ಇಸ್ಲಾಂ ಇಂಟೆರ್ ನ್ಯಾಷನಲ್ ಯೂತ್ ಫೆಡರೇಶನ್ ಎಂಬ ಹೆಸರಿನಲ್ಲಿ ಕಾರ್ಯಚರಿಸಿ, ತಮ್ಮ ಸೇವೆಯ ವಿಸ್ತಾರ ಹಾಗೂ ಆಡಳಿತಾತ್ಮಕ ಸಂಯೋಜನೆಗೋಸ್ಕರ ಅಲ್ ಹಿದಾಯ ಇಂಟರ್ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ ಮರ್ಧಾಳ ಎಂಬ  ಹೆಸರಲ್ಲಿ ಪ್ರಸ್ತುತ ಕಾರ್ಯಚಾರಿಸುತ್ತಿದೆ..





ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ನ್ನು ಮಾಡಿರುವ ಈ ಸಂಸ್ಥೆ ಯು ಬಡವರ ಪಾಲಿನ ಆಶಾಕಿರಣ, ಬಡವರ ಕಣ್ಣೀರನ್ನು ಒರಸುವ ಹಲವಾರುವ ಕಾರ್ಯಕ್ರಮಗಳನ್ನು ಮಾಡಿ ಜನ ಮನ್ನನೆ ಪಡೆದಿದೆ. ಹಸಿವು ಮುಕ್ತ ಕುಟುಂಬ ಯೋಜನೆ, ಕೊರೋನ ಸಂದರ್ಭ ಹಾಗೂ ರಂಜಾನ್ ತಿಂಗಳಲ್ಲಿ ಆಹಾರ ಕಿಟ್ ವಿತರಣೆ, ಬಡ, ಯಾತೀಮ್ ಮಕ್ಕಳ ಮದುವೆ ಕಾರ್ಯಕ್ರಮ, ವಿದ್ಯಾಭ್ಯಾಸ ಕ್ಕೆ ಪ್ರೋತ್ಸಾಹ, ಹಲವಾರು ಅರೋಗ್ಯ ಕ್ಯಾಂಪ್ ಗಳು, ರಕ್ತದಾನ ಶಿಬಿರ, ಶೈಕ್ಷಣನಿಕ ಕಾರ್ಯಗಾರ ಗಳು, ಮನೆ ಕಟ್ಟಲು ಸಹಾಯ, ಊರಿನ ಸೌಹಾರ್ದತೆಗಾಗಿ ಹಲವಾರು ಸಾರ್ವಜನಿಕ  ಜನಮುಖಿ ಕಾರ್ಯಕ್ರಮ ಗಳು,ವಿದೇಶಗಳಲ್ಲಿ ಕೆಲಸಮಾಡುತ್ತಿರುವ ತಮ್ಮ ಸದಸ್ಯರುಗಳ ಕಷ್ಟಗಳಿಗೂ ಸ್ಪಂದಿಸುತ್ತ ಊರಿನ ಜನರ ನಡುವೆ  ಇಂಟರ್ನ್ಯಾಷನಲ್ ವಿಂಗ್ ಎಂದೇ ಪ್ರಖ್ಯಾತವಾಗಿರುವ  ಈ ಸಂಘಟನೆ ಯು ದಿನಾಂಕ 6/11/2025 ರಿಂದ ಸರಕಾರದ ರಿಜಿಸ್ಟರ್ ಪ್ರಕ್ರಿಯನ್ನು ಪೂರ್ತಿ ಗೊಳಿಸಿ…..






ಅಲ್  ಹಿದಾಯ ಇಂಟರ್ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ (ರಿಜಿಸ್ಟಡ್ PUT-4-00605-2025-26) ಎಂಬುದಾಗಿ ಮಾನ್ಯತೆಯನ್ನು ಪಡೆದಿದೆ,ಮುಂದಿನ ದಿನಗಳಲ್ಲಿ ತಮ್ಮ ಕಾರ್ಯವನ್ನು ಮತ್ತಷ್ಟು  ವಿಸ್ತರಿಸಲಿದೆ ಎಂಬುದಾಗಿ ಸಂಸ್ಥೆಯ ಟ್ರಸ್ಟಿ ಹಾಗೂ ಗೌರವ ಅಧ್ಯಕ್ಷರಾದ ಅಬ್ದುಲ್ ಖಾದರ್ ಕೆನರಾ ರವರುವ ಅಧಿಕೃತ ವಾಗಿ ಘೋಸಿಸಿದರು, ಮರ್ಧಾಳ ಹ್ರದಯ ಭಾಗದಲ್ಲಿರುವ ಅಲ್ ನೂರ್ ಕಾಂಪ್ಲೆಕ್ಸ್ ನಲ್ಲಿ ಕಚೇರಿನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಮುಖ್ಯವಾಗಿ ಶೈಕ್ಷಣಿಕ, ಅರೋಗ್ಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಸ್ಥಿತಿಗತಿಗಳ ಸರ್ವತೋಮುಖ ಸುಧಾರಣೆಗಾಗಿ ಶ್ರಮಿಸಲಿದೆ ಎಂಬುದಾಗಿ ಸಂಸ್ಥೆಯ ಟ್ರಸ್ಟಿ ಹಾಗೂ ಕಾರ್ಯದರ್ಶಿ ಹೈದರ್ ಕೊಹಿನೂರ್ ರವರು ಪ್ರಕಟಣೆಯಲ್ಲಿ ತಿಳಿಸಿದರು…

ಈ ಸಂದರ್ಭದಲ್ಲಿ ಟ್ರಸ್ಟಿ ಗಳಾದ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಪಾಳತಡ್ಕ, ಸಿ. ಕೆ ಮುಹಮ್ಮದ್ ಕಲ್ಲಾಜೆ, ಹಬೀಬ್ ಮುಸ್ಲಿಯಾರ್ ನಿಂತಿಕಲ್ಲು, ಹಾಜಿ ಸಿರಾಜ್ ಕೊಡಿಕಂಡ, ಅಶ್ರಫ್ ಶಾಂತಿನಗರ ರವರು ಭಾಗಿಯಾಗಿದ್ದರು, ಮಂಗಳೂರಿನ ಪ್ರಖ್ಯಾತ ಅಡ್ವಾಕೇಟ್ ಇಶಾಕ್. ಕೆ ರವರ ಮಾರ್ಗದರ್ಶನ ದಲ್ಲಿ ರಿಜಿಸ್ಟರ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದರು. ಸಂಸ್ಥೆಯ ಉನ್ನತ ಬೆಳವಣಿಗೆಗಾಗಿ ಸಹಕರಿಸಿದ ಪ್ರವಾಸಿಗಾರನ್ನು, ಊರ ಮಹನೀಯರ ಸೇವೆಯನ್ನು ಅಧ್ಯಕ್ಷರಾದ ಹೈದರ್ ಪಾಳತಡ್ಕ ರವರು ಈ ಸಂದರ್ಭದಲ್ಲಿ ಸ್ಮರಿಸಿದರು.

 

error: Content is protected !!
Scroll to Top