(ನ್ಯೂಸ್ ಕಡಬ) newskadaba.com, ನ.07: ಬೆಂಗಳೂರು: ಚಿನ್ನದ ಬೆಲೆ ಗುರುವಾರ ತಾತ್ಕಾಲಿಕ ಏರಿಕೆ ಆದ ಬಳಿಕ, ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಅದ್ಯ ಬೆಲೆ ಏರಿಕೆ ಪರ್ವಕ್ಕೆ ಬ್ರೇಕ್ ಬಿದ್ದಿದ್ದು, ಚಿನ್ನ ಕೊಳ್ಳುವವರಿಗೆ ಇದು ಬೆಸ್ಟ್ ಟೈಂ ಆಗಿದೆ.
ಶುದ್ಧ ಚಿನ್ನದ ಇಂದಿನ ದರ
ನವೆಂಬರ್ 7 ಶುಕ್ರವಾರದಂದು ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,202 ರೂಪಾಯಿ ಇದ್ದು, ಇಂದು 55 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,22 020 ರೂಪಾಯಿ ಇದೆ. 24 ಕ್ಯಾರೆಟ್ ಬೆಲೆಯಲ್ಲಿ ಇಂದು ಒಟ್ಟು 550 ರೂ ಇಳಿಕೆ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 11,185 ರೂಪಾಯಿ ಇದ್ದು, 50 ರೂ ಇಳಿಕೆ ಕಂಡಿದೆ. 10 ಗ್ರಾಂ ಬೆಲೆ 1,11,850 ರೂಪಾಯಿ ಇದೆ. ಇಂದು 500 ರೂ ಏರಿಕೆ ಆಗಿದೆ.
ಬೆಳ್ಳಿ ಬೆಲೆ ಏರಿಕೆ
ಬೆಳ್ಳಿ ಬೆಲೆ ಇಂದು ತಟಸ್ಥವಾಗಿದ್ದು, ಗ್ರಾಂಗೆ 152.50 ರೂ ಆಗಿದ್ದು ಕೆಜಿಗೆ 1,52,500 ರೂ ಇದೆ.
ಈ ವಾರ ಚಿನ್ನದ ಬೆಲೆ ಏರಿಳಿತದ ಸಾಧ್ಯತೆ
ಅಕ್ಟೋಬರ್ 1 ರಿಂದ ಆರಂಭವಾಗಿರುವ ಮತ್ತು ಅಮೆರಿಕದ ಇತಿಹಾಸದಲ್ಲಿಯೇ ಅತಿ ದೀರ್ಘಕಾಲ ಮುಂದುವರೆದಿರುವ ಅಮೆರಕ ಸರ್ಕಾರದ ಶಟ್‌ಡೌನ್ ಕಾರಣದಿಂದ ಸುರಕ್ಷಿತ ಹೂಡಿಕೆಗಳ ಮೇಲಿನ ಬೇಡಿಕೆಯನ್ನು ಹೆಚ್ಚಿಸಿದೆ. ಡಾಲರ್ ಸೂಚ್ಯಂಕವು 100 ಅಂಕಗಳ ಕೆಳಗೆ ಕುಸಿದಿರುವುದು ಕೂಡ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿದೆ. ಡಾಲರ್ ದುರ್ಬಲಗೊಂಡಾಗ, ವಿದೇಶಿ ಕರೆನ್ಸಿಗಳಲ್ಲಿ ಚಿನ್ನ ಅಗ್ಗವಾಗುತ್ತದೆ, ಇದು ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.








