(ನ್ಯೂಸ್ ಕಡಬ) newskadaba.com, ನ.07: ಎಡಮಂಗಲದಲ್ಲಿ ಈ ಹಿಂದೆ ರೈಲು ನಿಲುಗಡೆಗೆ ಇದ್ದಿದ್ದು,ಅದನ್ನು ಕೊರೊನಾ ಸಮಯದಲ್ಲಿ ರದ್ದುಪಡಿಸಲಾಯಿತು.
ಬಳಿಕ ಎಡಮಂಗಲದ ರೈಲು ಪ್ರಯಾಣಿಕರ ಬವಣೆ ಹೇಳತೀರದು..ದಿನನಿತ್ಯ ಮಂಗಳೂರಿಗೆ ಹೋಗುವವರಿಗೆ ತುಂಬಾ ಕಷ್ಟ ಪಡಬೇಕಾಯಿತು.ಇತ್ತೀಚಿಗೆ ಪ್ರಧಾನಿ ಕಚೇರಿಗೆ,ಕೇಂದ್ರ ರೈಲು ಸಚಿವರಿಗೆ,ರಾಜ್ಯ ಸಚಿವರಿಗೆ,ಮೈಸೂರ್ ಡಿವಿಜನಲ್ ಪತ್ರ ರವಾನೆ ಮಾಡಲಾಯಿತು.
ರೈಲ್ವೆ ಪ್ರಯಾಣಿಕರು ಸೇರಿಕೊಂಡು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ಮನವಿ ಪತ್ರ ನೀಡಲಾಯಿತು.ಪ್ರಯಾಣಿಕ ಜೀವೇಂದ್ರ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.








