ಕಡಬ: ಸಿ.ಸಿ.ಕ್ಯಾಮರಾ ಹಾಗೂ ಕಂಪ್ಯೂಟರ್ ಮಳಿಗೆ ‘ಡಿಜಿಟಲ್ ಸಿಸ್ಟಮ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.01. ಇಲ್ಲಿನ ಮುಖ್ಯ ರಸ್ತೆಯ ಟೋಮ್ ಬಜಾರ್ ಬಿಲ್ಡಿಂಗ್‌ನಲ್ಲಿ ಕಂಪ್ಯೂಟರ್ ಮತ್ತು ಸಿ.ಸಿ.ಟಿವಿ ಮಳಿಗೆ “ಡಿಜಿಟಲ್ ಸಿಸ್ಟಮ್ಸ್” ಸೋಮವಾರದಂದು ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಆಲಂಕಾರು ಹಾಗೂ ಕಟ್ಟಡದ ಮಾಲಕ ತೋಮ್ಸನ್ ಕೆ.ಟಿ. ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಕೃಪಾ ಕನ್‌ಸ್ಟ್ರಕ್ಷನ್ ನ ಮಾಲಕ ಶಾಜಿ ಜೋನ್ ಮೊದಲ ಗ್ರಾಹಕರಾಗಿ ಖರೀದಿಸಿದರು. ಈ ಸಂದರ್ಭದಲ್ಲಿ ಮಳಿಗೆಯ ಮಾಲಕರ ತಾಯಿ ಸೂಸಮ್ಮ, ಅನ್ನಮ್ಮ, ಎಲಿಯಮ್ಮ, ಪೀಟರ್, ಶಾಂತಿ ಟಿ.ಐ., ದುರ್ಗಾಂಬಾ ಮೊಬೈಲ್ಸ್ ನ ಮಾಲಕ ದಯಾನಂದ, ಐಸಾಕ್, ಜೋನ್, ರಾಜು, ಜಿಬಿನ್, ಕಿಶೋರ್ ಶಾಂತಿಗುರಿ, ಲೋಕೇಶ್, ಮೋಲಿ, ಜಾರ್ಜ್‌ಕುಟ್ಟಿ ಕುಂಟ್ಲಾಯಿ, ಮುತ್ತಾಯಿ ಕಡುವಕುಜಿ ಉಪಸ್ಥಿತರಿದ್ದರು. ಮಾಲಕ ಅಜಿತ್ ಎಲ್ಲರನ್ನು ಸ್ವಾಗತಿಸಿ ಬರಮಾಡಿಕೊಂಡರು.

Also Read  ದರೆಗುಡ್ಡೆ ಗ್ರಾಮಸಭೆ ಹಾಗೂ ವಾರ್ಡು ಸಭೆ

ದೇವಸ್ಥಾನ, ಶಾಲಾ ಕಾಲೇಜು, ಅಂಗಡಿ ಕಟ್ಟಡ, ವಾಣಿಜ್ಯ ಮಳಿಗೆ ಹಾಗೂ ಇನ್ನಿತರ ಕಡೆಗಳಿಗೆ ಬೇಕಾದ ಸಿಸಿ ಟಿವಿಯನ್ನು ಅಳವಡಿಸಿ ಕೊಡಲಾಗುವುದು ಹಾಗೂ ನಮ್ಮಲ್ಲಿ ಕಂಪ್ಯೂಟರ್ ಬಿಡಿಭಾಗಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಅಜಿತ್ ತಿಳಿಸಿದ್ದಾರೆ.

error: Content is protected !!
Scroll to Top